ನವದೆಹಲಿ: ಭೂಮಿಯ ಸತ್ವ ನಾಶ, ಬರ, ಮರುಭೂಮಿ ಹೆಚ್ಚಳವಾಗುತ್ತಿರುವುದು ಮೊದಲಾದ ಸವಾಲುಗಳ ಬಗ್ಗೆ ವಿಶ್ವ ಸಮುದಾಯ ಜಾಗೃತರಾಗಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ.
ಮರುಭೂಮಿ ತಡೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ 14 ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂಮಿಯ ಫಲವತ್ತತೆ ಕಾಪಾಡಲು ಭಾರತ ಹೊಸ ರೀತಿಯ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. 2030 ರೊಳಗಾಗಿ ಫಲವಂತಿಕೆ ಕಳೆದುಕೊಂಡ ಭೂಮಿಯ ಪುನಶ್ಚೇತನದ ಗುರಿಯನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ. ಮಾತೆಯಂತೆ ನಾವು ಪೂಜಿಸುವ ಭೂಮಿಯ ಸಂಪನ್ಮೂಲಗಳ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಆ ಒತ್ತಡವನ್ನು ಕಡಿಮೆ ಮಾಡಲು ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅನೇಕ ಉಪಕ್ರಮಗಳನ್ನು ಮಾಡಿಕೊಳ್ಳಲಾಗಿದೆ. ಆ ಮೂಲಕ ಭೂಮಿಯ ಫಲವತ್ತತೆ ಕಾಪಾಡಲು ಭಾರತ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಗುಜರಾತ್ನ ರನ್ ಆಫ್ ಕಛ್ನಲ್ಲಿ ಇಂತಹ ಉಪಕ್ರಮಗಳನ್ನು ಕೈಗೊಂಡು ಭೂಮಿಯ ಸತ್ವ ಮರುಸ್ಥಾಪನೆಗೆ ಪ್ರಯತ್ನ ನಡೆಸಿ ಯಶಸ್ಸು ಗಳಿಸಿರುವುದಾಗಿ ತಿಳಿಸಿದ್ದಾರೆ.
ಇಂತಹ ಕಾರ್ಯಕ್ಕಾಗಿ ಭೂಮಿಯ ಸತ್ವಾಭಿವೃದ್ಧಿಗಾಗಿ ಭಾರತ ಇತರ ರಾಷ್ಟ್ರಗಳಿಗೂ ನೆರವು ನೀಡುತ್ತಿದೆ. ಭಾರತದಲ್ಲಿ ಫಲವತ್ತತೆ ನಾಶದಂತಹ ಸಮಸ್ಯೆ ತಡೆಯಲು ವೈಜ್ಞಾನಿಕವಾಗಿ ‘ಸೆಂಟರ್ ಫಾರ್ ಎಕ್ಸಲೆನ್ಸ್’ ಅನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗಿರುವುದನ್ನು ಸಹ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.