ಚಿಕ್ಕಮಗಳೂರು: ನಗರದ ಸಂಘಪರಿವಾರದ ಕಾರ್ಯಕರ್ತರ ‘ಸೂರು ಬಳಗ’, ಶಾಂತಿನಗರದ ಕಲ್ದೊಡ್ಡಿ ಬಡಾವಣೆಯಲ್ಲಿ ಗುಡಿಸಲಲ್ಲಿ ಏಕಾಂಗಿಯಾಗಿ ವಾಸವಿದ್ದ ಮರಿಯಮ್ಮ ಎಂಬ ಅಜ್ಜಿಗೆ ಪುಟ್ಟ ಸೂರನ್ನು ನಿರ್ಮಿಸಿ ಕೊಡುವ ಮೂಲಕ ಮಾದರಿಯಾಗಿದೆ.
ಈ ಮೊದಲು ಸಹ ಇಂತಹದ್ದೇ ಸೂರನ್ನು ನಿರ್ಮಿಸಿ ಕೊಟ್ಟಿರುವ ಕಾರ್ಯಕರ್ತರು, ಇದೀಗ ಎರಡನೇ ಸೂರು ನಿರ್ಮಿಸಿ ಅದನ್ನು ಬಡ ಅಜ್ಜಿಗೆ ಹಸ್ತಾಂತರ ಮಾಡುವ ಮೂಲಕ ಪ್ರೇರಣೆಯಾಗಿದ್ದಾರೆ.
ಸಮಾಜದ ಅಶಕ್ತರಿಗೆ ನೆರವಾಗುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಂಘಪರಿವಾರದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು. ಸ್ವಂತಕ್ಕಲ್ಲ, ಸಮಾಜಕ್ಕೆ ಎಂಬ ಉಕ್ತಿಯಂತೆ, ಕೊರೋನಾ ಸಂಕಷ್ಟದ ನಡುವೆಯೂ ಇಂತಹ ಮಹತ್ವದ ಕೆಲಸಗಳ ಮೂಲಕ ಸಮಾಜವನ್ನು ಕಟ್ಟುತ್ತಿರುವ ಇವರ ಸೇವೆ ಸ್ತುತ್ಯರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.