ನವದೆಹಲಿ: ಕೊರೋನಾ ಚಿಕಿತ್ಸಾ ಮಾರ್ಗಸೂಚಿಯಿಂದ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೊರೋಕ್ವಿನ್ ಮತ್ತು ಫೆವಿಫಿರವಿರ್ ಔಷಧಗಳನ್ನು ಕೇಂದ್ರ ಸರ್ಕಾರ ಹೊರಗಿಟ್ಟು ಆದೇಶ ಹೊರಡಿಸಿದೆ.
ಈ ಮೂರು ಔಷಧಗಳು ಕೊರೋನಾ ವಿರುದ್ಧ ಪರಿಣಾಮ ಬೀರುತ್ತವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂಬುದನ್ನು ತಜ್ಞರು ಪ್ರಸ್ಥಾಪಿಸಿದ್ದು, ಈ ಹಿನ್ನೆಲೆಯಲ್ಲಿ ಮೂರು ಔಷಧಗಳನ್ನು ಕೇಂದ್ರ ಸರ್ಕಾರ ಕೊರೋನಾ ಚಿಕಿತ್ಸಾ ಮಾರ್ಗಸೂಚಿಯಿಂದ ಹೊರಗಿಟ್ಟಿದೆ.
ಕೊರೋನಾ ಚಿಕಿತ್ಸೆಗೆ ದೇಶದೆಲ್ಲೆಡೆ ಐವರ್ಮೆಕ್ಟಿನ್ ಮತ್ತು ಫೆವಿಫಿರವಿರ್ ಔಷಧಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಈ ಔಷಧಗಳನ್ನು ಕೈ ಬಿಟ್ಟಿದೆ. ಜೊತೆಗೆ ಕೊರೋನಾ ಮೊದಲನೆ ಅಲೆಯ ಸಂದರ್ಭದಲ್ಲಿ ಬೇಡಿಕೆಯ ಔಷಧವಾಗಿದ್ದ ಹೈಡ್ರಾಕ್ಸಿಕ್ಲೊರೋಕ್ವಿನ್ ಸಹ ಈ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ.
ಕೊರೋನಾ ಚಿಕಿತ್ಸೆಗೆ ಅಜಿಥ್ರೋಮೈಸಿನ್, ಡಾಕ್ಸಿಸೈಕ್ಲಿನ್, ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೊರೋಕ್ವಿನ್, ವಿಟಮಿನ್ ಸಿ, ವಿಟಮಿನ್ ಡಿ, ಅಸೆಟೈಲ್ಸಿಸ್ಟೈನ್, ಬುಡೆಸೂನೈಡ್ ,ಡೆಕ್ಸಮೆಥಾಸೊನ್ ಗಳ ಬಳಕೆಗೆ ವ್ಯಾಪಕ ಶಿಫಾರಸು ಭಾರತದಲ್ಲಿ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.