ನವದೆಹಲಿ: ಇಂದು ವಿಶ್ವ ಪರಿಸರ ದಿನ. ಕೋವಿಡ್ ಸಂಕಷ್ಟದ ನಡುವೆಯೂ ಜಗತ್ತಿನಾದ್ಯಂತ ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಉಸಿರಾದ ಹಸಿರನ್ನು ಉಳಿಸಲು ಎಲ್ಲೆಡೆ ಜನ ಜಾಗೃತಿ ಆಯೊಜಿಸಲಾಗಿದೆ. “ಮರು ನಿರ್ಮಾಣ, ಮರು ಸೃಷ್ಠಿ ಮತ್ತು ಮರು ಸ್ಥಾಪನೆ ” ಈ ವರ್ಷದ ಘೋಷವಾಕ್ಯವಾಗಿದೆ.
ಪರಿಸರ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದು, ಹವಾಮಾನ ಸಂರಕ್ಷಣೆಗೆ, ಪರಿಸರ ರಕ್ಷಿಸಲು ನಮ್ಮ ಸಂಘಟಿತ ಪ್ರಯತ್ನ ಅತಿ ಮುಖ್ಯ. ದೇಶದ ಪ್ರತಿಯೊಬ್ಬ ನಾಗರಿಕನು ಗಾಳಿ, ನೀರು, ಭೂಮಿಯ ಸಮತೋಲನವನ್ನು ಕಾಯ್ದುಕೊಳ್ಳಲು ಒಗ್ಗಟ್ಟಿನ ಪ್ರಯತ್ನ ಮಾಡಬೇಕಿದೆ. ಆಗ ಮಾತ್ರ ಮುಂದಿನ ಪೀಳಿಗೆಗೆ ನಾವು ಸುರಕ್ಷಿತ ವಾತಾವರಣ ನೀಡಲು ಸಾಧ್ಯ ಎಂದಿದ್ದಾರೆ.
जलवायु की रक्षा के लिए, पर्यावरण की रक्षा के लिए हमारे प्रयासों का संगठित होना बहुत ज़रूरी है।
देश का एक-एक नागरिक जब जल-वायु और ज़मीन के संतुलन को साधने के लिए एकजुट होकर प्रयास करेगा, तभी हम अपनी आने वाली पीढ़ियों को एक सुरक्षित पर्यावरण दे पाएंगे: PM @narendramodi
— PMO India (@PMOIndia) June 5, 2021
ರಾಷ್ಟ್ರಪತಿ ರಾಮನಾಥ ಕೋವಿಂದ್, ವಿಶ್ವ ಪರಿಸರ ದಿನಕ್ಕೆ ಶುಭ ಕೋರಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಅವರು, ಪರಿಸರದೊಂದಿಗೆ ಸಾಮರಸ್ಯದಿಂದ ಬದುಕುವುದು ಮತ್ತು ಜೀವ ವೈವಿಧ್ಯತೆಯನ್ನು ರಕ್ಷಿಸುವುದು ಭಾರತೀಯ ನೀತಿ ಮತ್ತು ಸಂಸ್ಕೃತಿಯಾಗಿದೆ. ಕೋವಿಡ್-19 ರ ವಿರುದ್ಧ ಇಡೀ ಮನುಕುಲ ಹೋರಾಡುತ್ತಿದೆ, ಸುಸ್ಥಿರ ಭವಿಷ್ಯಕ್ಕಾಗಿ ಜಾಗತಿಕ ಸಮುದಾಯದೊಂದಿಗೆ ನಾವು ಬದ್ಧತೆಯಿಂದ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.
Living in harmony with nature and protecting biodiversity has been at the centre of Indian ethos and culture. On #WorldEnvironmentDay, as humanity fights against COVID-19, we reaffirm our commitment to work with global community for a sustainable future.
— President of India (@rashtrapatibhvn) June 5, 2021
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು , ಪರಿಸರ ರಕ್ಷಣೆ ಮತ್ತು ಪುನರ್ ಸ್ಥಾಪನೆಗಾಗಿ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸೋಣ. ಸುಸ್ಥಿರ ಕೃಷಿ ಪದ್ಧತಿಗಳಿಗೆ ಪರಿವರ್ತನೆಗೊಂಡು, ಕಾಡುಗಳನ್ನು ಪುನರ್ ನಿರ್ಮಿಸಿ, ಸಮುದ್ರ ಮಾಲಿನ್ಯ ತಗ್ಗಿಸೋಣ ಎಂದು ಹೇಳಿದ್ದಾರೆ.
On this #WorldEnvironmentDay, let us intensify our efforts to protect and restore our degrading ecosystems. Let us switch to sustainable agricultural practices in our farmlands, rewild our forests and stop marine pollution. #WorldEnvironmentDay2021
— Vice-President of India (@VPIndia) June 5, 2021
ವಿಶ್ವ ಪರಿಸರ ದಿನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭ ಕೋರಿದ್ದಾರೆ. ಪರಿಸರದಿಂದ ಎಲ್ಲವನ್ನೂ ಪಡೆಯುವ ನಾವು , ಅದರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಹ ನಿರ್ವಹಿಸಬೇಕು. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಮುನ್ನಡೆಯೋಣ. ಸಮೃದ್ಧ, ಸಮತೋಲಿತ ಪರಿಸರವನ್ನು ಪುನಃ ಸ್ಥಾಪಿಸೋಣ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. ಪರಿಸರದಿಂದ ಎಲ್ಲವನ್ನೂ ಪಡೆಯುವ ನಾವು ಅದರ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸಲೇಬೇಕು. ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ. ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೂಡಿ ಮುನ್ನಡೆಯೋಣ, ಸಮೃದ್ಧ, ಸಮತೋಲಿತ ಪರಿಸರವನ್ನು ಪುನಃ ಸ್ಥಾಪಿಸೋಣ. pic.twitter.com/cIJBHUmgUu
— B.S.Yediyurappa (@BSYBJP) June 5, 2021
ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳು ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನಗಳ ಪ್ರಚಾರ ಕುರಿತ ಈ ಕಾರ್ಯಕ್ರಮ ವನ್ನು ಜಂಟಿಯಾಗಿ ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಅವರು, 2020-25 ರ ಅವಧಿಯಲ್ಲಿ ಭಾರತದಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ನೀಲ ನಕ್ಷೆ ಕುರಿತ ತಜ್ಞರ ಸಮಿತಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.