ನವದೆಹಲಿ: ಗುಪ್ತಚರ ಇಲಾಖೆ ಅಥವಾ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ನಿವೃತ್ತಿ ಬಳಿಕ ‘ಸೂಕ್ಷ್ಮ ಮಾಹಿತಿ’ ಗಳನ್ನು ಪ್ರಕಟಿಸದಂತೆ ತಡೆಯುವ ಮೂಲಕ ಕೇಂದ್ರ ಸರ್ಕಾರ ತನ್ನ ಈ ಹಿಂದಿನ ನಿಯಮಗಳಿಗೆ ತಿದ್ದುಪಡಿ ತಂದಿದೆ.
ಕೇಂದ್ರ ನಾಗರಿಕ ಸೇವೆಗಳ ತಿದ್ದುಪಡಿ 2021 ರ ಈ ಹೊಸ ನಿಯಮದನ್ವಯ ಯಾವುದೇ ಅಧಿಕಾರಿ ತಾನು ಕೆಲಸ ಮಾಡುವ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಹಂಚುವಂತಿಲ್ಲ. ಒಂದು ವೇಳೆ ಪ್ರಕಟಿಸುವುದೇ ಆದರೆ ಸಂಸ್ಥೆಯ ಮುಖ್ಯಸ್ಥರಿಂದ ಪೂರ್ವಾನುಮತಿ ಪಡೆಯಬೇಕು. 2007 ರಿಂದೀಚೆಗೆ ಸಂಸ್ಥೆಯ ವಿಭಾಗ ಮುಖ್ಯಸ್ಥರ ಅನುಮತಿ ಇದ್ದರೆ ಪ್ರಕಟಿಸಲು ಸಮ್ಮತಿಸಲಾಗಿತ್ತು.
ಈ ಹೊಸ ನಿಯಮದನ್ವಯ ಈ ಸಂಬಂಧ ಎಲ್ಲಾ ಜವಾಬ್ದಾರಿಗಳನ್ನು ಸಹ ಸಂಸ್ಥೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅವರ ಅನುಮತಿ ಪಡೆಯದೇ ಪ್ರಕಟಿಸುವ ಸಿಬ್ಬಂದಿಗಳ ಪಿಂಚಣಿ ಹಿಂಪಡೆವ ಅಥವಾ ತಡೆ ಹಿಡಿವ ಅಧಿಕಾರವನ್ನು ಸಹ ಮುಖ್ಯಸ್ಥರಿಗೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.