ನವದೆಹಲಿ: ದೇಶದಲ್ಲಿ ಕೊರೋನಾದ ಎರಡನೇ ಅಲೆ ಆರ್ಭಟಿಸುತ್ತಿದ್ದು, ಅನೇಕ ಕುಟುಂಬಗಳು ಈಗಾಗಲೇ ತಮ್ಮ ಆಪ್ತರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿವೆ. ಇಂತಹ ಜೀವ ವಿಮೆಯು ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ವೈದ್ಯಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಆರೋಗ್ಯ ವೆಚ್ಚಗಳು ಮತ್ತು ಆರ್ಥಿಕ ಭದ್ರತೆ ಅತ್ಯಂತ ಮಹತ್ವದ್ದಾಗಿದ್ದು, ಜನರು ಕೂಡ ಇದನ್ನು ಅರಿತುಕೊಂಡಿದ್ದಾರೆ. ಕೋವಿಡ್ನಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಒಂದು ಪ್ರಮುಖ ಸಹಾಯವಾಗಿ ಹೊರಹೊಮ್ಮಿದೆ ಮತ್ತು ಈ 2 ಲಕ್ಷ ರೂಪಾಯಿಯ ವಿಮಾ ಮೊತ್ತಕ್ಕೆ ಪೀಡಿತ ಕುಟುಂಬಗಳು ಅರ್ಹರಾಗುವಂತೆ ಖಚಿತಪಡಿಸಲಾಗುತ್ತಿದೆ.
ಪಿಎಂಜೆಜೆಬಿವೈ ಅನ್ನು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮತ್ತು ಇತರ ವಿಮಾ ಕಂಪನಿಗಳು ನಿರ್ವಹಿಸುತ್ತಿವೆ ಮತ್ತು ಇದು ವಾರ್ಷಿಕ ಆಧಾರದ ಮೇಲೆ ನವೀಕರಿಸಬಹುದಾದ ವಿಮಾ ಯೋಜನೆ. ಇದು ಜೂನ್ 1 ರಿಂದ ಮೇ 31 ರವರೆಗೆ ಒಂದು ವರ್ಷದ ವಿಮಾ ಅವಧಿಯ ಪಾಲಿಸಿಯನ್ನು ಹೊಂದಿದೆ. ಇದು ಕೋವಿಡ್, ಕೊಲೆ ಮತ್ತು ಆತ್ಮಹತ್ಯೆಗಳು ಸೇರಿದಂತೆ ಯಾವುದೇ ಕಾರಣಗಳಿಂದಾಗಿ ಸಂಭವಿಸಿದ ಸಾವಿಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. 18 ರಿಂದ 50 ವರ್ಷದೊಳಗಿನ ಜನರು ಜೀವ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಪಿಎಂಜೆಜೆಬಿವೈಗೆ ಯಾರು ಅರ್ಹರು?
ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ಹೊಂದಿರುವ 18 ರಿಂದ 50 ವರ್ಷದೊಳಗಿನ ಜನರು,
ವಿವಿಧ ಬ್ಯಾಂಕುಗಳಲ್ಲಿ ಅನೇಕ ಖಾತೆಗಳನ್ನು ಹೊಂದಿರುವವರು ಕೂಡ ಈ ವಿಮೆ ತೆರೆಯಬಹುದು. ಆದರೆ ಒಂದು ಉಳಿತಾಯ ಖಾತೆಯಲ್ಲಿ ಒಮ್ಮೆ ಮಾತ್ರ ಒಬ್ಬರು ಪಾಲಿಸಿ ತೆರೆಯಬಹುದು.
ಪಿಎಂಜೆಜೆಬಿವೈನ ಮುಕ್ತಾಯದ ವಯಸ್ಸು 55 ವರ್ಷಗಳು, ಅಂದರೆ ವ್ಯಕ್ತಿಗೆ 55 ವರ್ಷ ತುಂಬಿದ ನಂತರ ವಿಮಾ ಪಾಲಿಸಿಯನ್ನು ಕೊನೆಗೊಳಿಸಲಾಗುತ್ತದೆ.
ಈ ಪಾಲಿಸಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ.
ಪಿಎಂಜೆಜೆಬಿವೈ ಅಡಿಯಲ್ಲಿ ನಾಮಿನಿಯು ವಿಮೆಯನ್ನು ಹೇಗೆ ಪಡೆಯಬಹುದು?
ನಾಮಿನಿಯು ಮೊದಲು ತನ್ನ ಕುಟುಂಬದ ಸದಸ್ಯ ಪಿಎಂಜೆಜೆಬಿವೈ ಹೊಂದಿದ ಬ್ಯಾಂಕ್ ಅನ್ನು ಮೊದಲು ಸಂಪರ್ಕಿಸಬೇಕು.
ವಿಮಾ ಮೊತ್ತವನ್ನು ಪಡೆಯಲು ಆತನ ಮರಣ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯ.
ಕ್ಲೈಮ್ ಫಾರ್ಮ್ಗಳು, ಮರುಪಾವತಿ ರಶೀದಿಗಳು, ಬ್ಯಾಂಕಿನಿಂದ ಡಿಸ್ಚಾರ್ಜ್ ಆದ ರಶೀದಿಗಳು ಮತ್ತು ಇತರ ಗೊತ್ತುಪಡಿಸಿದ ದಾಖಲೆಗಳನ್ನು ನಾಮಿನಿಯು ಸಿದ್ಧಪಡಿಸಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆಯ ದಿನಾಂಕದಿಂದ 30 ದಿನಗಳಲ್ಲಿ ಬ್ಯಾಂಕುಗಳು ಪೂರ್ಣಗೊಂಡ ಎಲ್ಲಾ ಕ್ಲೇಮ್ಗಳನ್ನು ವಿಮಾ ಕಂಪನಿಗೆ ರವಾನಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.