ಬೆಂಗಳೂರು: ಎಲೆಕ್ಟ್ರಿಕ್ ವೆಹಿಕಲ್ (ವಿದ್ಯುತ್ ವಾಹನಗಳು) ಮೇಲಿನ ಹೂಡಿಕೆಯನ್ನು ರಾಜ್ಯದಲ್ಲಿ ಉಳಿಸಿಕೊಳ್ಳುವ ಮತ್ತು ಮತ್ತಷ್ಟು ಹೂಡಿಕೆದಾರರನ್ನು ರಾಜ್ಯದಲ್ಲಿ ಉದ್ಯಮ ಆರಂಭಿಸುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೂಡಿಕೆದಾರರಿಗೆ ಸ್ಪರ್ಧಾತ್ಮಕ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸ್ಥಿರಾಸ್ತಿಗಭ ಮೌಲ್ಯದ ಮೇಲಿನ 15% ಮರುಪಾವತಿ, ಉತ್ಪಾದನೆ ಆಧರಿತ ಸಬ್ಸಿಡಿ ಮತ್ತು ತರಭೇತಿ ಭತ್ಯೆ ಸೇರಿದಂತೆ ಹೊಸ ಸವಲತ್ತುಗಳನ್ನು ಒದಗಿಸುವ ಸಂಬಂಧ 2017 ರ.ಇವಿ ಮತ್ತು ಇಂಧನ ಸಂಗ್ರಹ ನೀತಿಯಲ್ಲಿ ತಿದ್ದುಪಡಿ ತರಲು ಸರ್ಕಾರ ಯೋಚಿಸಿದೆ.
50% ಮಾತ್ರ ಇದ್ದ ವಿಎಫ್ಎ ಮರುಪಾವತಿ ತೆರವು ಮಾಡಿ, ಗರಿಷ್ಠ 50 ಎಕರೆ ಭೂಮಿ ಮೇಲಿನ ಸಂಪೂರ್ಣ ವಿಎಫ್ಎಯನ್ನು ಐದು ಸಮಾನ ವಾರ್ಷಿಕ ಕಂತಿನಂತೆ 15% ಗಳಿಗೆ ನಿಗದಿ ಮಾಡಲು ತೀರ್ಮಾನಿಸಿದೆ. ಜೋಡಣೆ, ಉತ್ಪಾದನೆ, ಇವಿ ಸೆಲ್ ಉತ್ಪಾದನೆ, ಇವಿ ಬ್ಯಾಟರಿ ಪ್ಯಾಕ್, ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಉತ್ಪಾದಿಸುವುದು ಮೊದಲಾದ ವಾಣಿಜ್ಯ ಕಾರ್ಯಾಚರಣೆಗೆ ಮೊದ ವರ್ಷದಿಂದ 5 ವರ್ಷಗಳ ವರೆಗೆ 1% ಉತ್ಪಾದನೆ ಆಧಾರಿತ ಸಬ್ಸಿಡಿ ಒದಗಿಸಲು ಸರ್ಕಾರ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.