ಬೆಂಗಳೂರು: ಕರ್ನಾಟಕವು COVIDActionCollab ಸಹಭಾಗಿತ್ವದಲ್ಲಿ ತ್ಯಾಜ್ಯ ನೀರಿನ ಮೂಲಕ ಕೋವಿಡ್ ಅನ್ನು ಪತ್ತೆಹಚ್ಚುವ ವ್ಯವಸ್ಥೆಯೊಂದನ್ನು ಪ್ರಾರಂಭಿಸಿದೆ. ಬೆಂಗಳೂರು ನಗರದಾದ್ಯಂತದ ಮೊದಲ ಉಪಕ್ರಮವಾಗಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ನಗರವಾರು ವ್ಯರ್ಥ ನೀರಿನ ಕಣ್ಗಾವಲು ವ್ಯವಸ್ಥೆ ಇದಾಗಿದ್ದು, ಇದು ರೋಗಲಕ್ಷಣವಿಲ್ಲದ ವ್ಯಕ್ತಿಗಳಲ್ಲೂ ಕೂಡ ಆರಂಭಿಕ ಹಂತದಲ್ಲಿ ವೈರಸ್ ಅನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.
ಈ ಪ್ರಯತ್ನಕ್ಕೆ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮತ್ತು ಸ್ಕೋಲ್ ಫೌಂಡೇಶನ್-ಬೆಂಬಲಿತ COVIDactionCollab (ಸಿಎಸಿ) ಬೆಂಬಲ ನೀಡಿದೆ. ಇದು ಭಾರತದಾದ್ಯಂತ 300 ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು ನೆಟ್ವರ್ಕ್ಗಳ ಸಹಯೋಗದೊಂದಿಗೆ ಕೋವಿಡ್-19 ಪರಿಹಾರ ಮತ್ತು ಸೇವೆಗಳನ್ನು ದೇಶದಾದ್ಯಂತದ ದುರ್ಬಲ ಸಮುದಾಯಗಳಿಗೆ ಒದಗಿಸುತ್ತಿದೆ.
ಕಳೆದ ವರ್ಷ, ಪ್ರಪಂಚದಾದ್ಯಂತದ ವಿಜ್ಞಾನಿಗಳು ತ್ಯಾಜ್ಯ ನೀರಿನ ಮೂಲಕ ನಡೆಸುವ ಪರೀಕ್ಷೆಯು ವೆಚ್ಚ ಪರಿಣಾಮಕಾರಿಯಾಗಿದೆ ಮತ್ತು ಇದು ಮುನ್ನೆಚ್ಚರಿಕೆ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಧಿಕೃತ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಮೊದಲೇ ಕೋವಿಡ್-19 ಹೆಚ್ಚಳವನ್ನು ಇದು ಊಹಿಸುತ್ತದೆ. ಏಷ್ಯಾದಲ್ಲೇ ಈ ರೀತಿಯ ಮೊದಲನೆಯ ವ್ಯವಸ್ಥೆ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಈ ವ್ಯವಸ್ಥೆಯಡಿ ಹೊಸ ಸೋಂಕುಗಳನ್ನು ಗುರುತಿಸಲು ಒಳಚರಂಡಿ ಮತ್ತು ಒಳಚರಂಡಿ ಅಲ್ಲದ ತ್ಯಾಜ್ಯ ನೀರನ್ನು ಪರೀಕ್ಷಿಸಲಾಗುತ್ತದೆ. ಇದರಲ್ಲಿ ವೈರಸ್ ಇದೆಯೇ ಎಂಬುದನ್ನು ಪತ್ತೆಹಚ್ಚಿ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ನೈರ್ಮಲ್ಯ ಕಾರ್ಮಿಕರಿಗೆ ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳಿಗೆ ಕೊಳಚೆ ನೀರಿನ ಮಾದರಿಗಳನ್ನು ಸಂಗ್ರಹಿಸಲು ಮತ್ತು ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಸಾಗಿಸಲು ತರಬೇತಿ ನೀಡಲಾಗುತ್ತಿದೆ ಮತ್ತು ಅವುಗಳನ್ನು ವಿಶ್ಲೇಷಿಸುವ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕಾರ್ಯವನ್ನು ಮಾಡಲಾಗುತ್ತದೆ. ತಾಂತ್ರಿಕ ತಜ್ಞರ ಗುಂಪು ವಿಶ್ಲೇಷಣೆಯ ಆಧಾರದ ಮೇಲೆ ಸಂಭವನೀಯ ಕೋವಿಡ್-19 ತಡೆಗಟ್ಟುವಿಕೆ, ಆರೈಕೆ ಮತ್ತು ನಿರ್ವಹಣಾ ಸೇವೆಗಳಿಗಾಗಿ ಸಂಬಂಧಿಸಿದವರಿಗೆ ಪ್ರೋಗ್ರಾಮಿಕ್ ಒಳಹರಿವು ಮತ್ತು ಒಳನೋಟಗಳನ್ನು ಒದಗಿಸುತ್ತದೆ.
ಕರ್ನಾಟಕ ಸರ್ಕಾರ ಬೆಂಗಳೂರಿನ 45 ವಾರ್ಡ್ಗಳಲ್ಲಿ ಈ ಪರೀಕ್ಷೆಯನ್ನು ಪ್ರಾರಂಭಿಸಲು ಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.