ಗುವಾಹಟಿ: 1985 ರ ಅಸ್ಸಾಂ ಒಪ್ಪಂದದ ನಿಬಂಧನೆಗಳ ಪ್ರಕಾರ ಕಾರ್ಯರೂಪಕ್ಕೆ ಬಂದ ನುಮಾಲಿಘರ್ ರಿಫೈನರಿ (ಎನ್ಆರ್ಎಲ್) ತನ್ನ ಉತ್ಪಾದನಾ ಸಾಮರ್ಥ್ಯವನ್ನು ಈಗಿರುವ 3 ಮಿಲಿಯನ್ ಮೆಟ್ರಿಕ್ ಟನ್ಗಳಿಂದ (ಎಂಎಂಟಿ) 9 ಎಂಎಂಟಿಗೆ ಹೆಚ್ಚಿಸುತ್ತಿದೆ. ಇದರ ಜೊತೆಗೆ ಒಡಿಶಾದಿಂದ 6 ಎಂಎಂಟಿ ಕಚ್ಚಾ ತೈಲವನ್ನು ಅಸ್ಸಾಂಗೆ ತರುತ್ತಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಎನ್ಆರ್ಎಲ್ ಒಡಿಶಾದ ಪರದೀಪ್ನಿಂದ ಕಚ್ಚಾ ತೈಲವನ್ನು ಪೈಪ್ಲೈನ್ ಮೂಲಕ ತಂದ ನಂತರ ಅದನ್ನು ಅಸ್ಸಾಂನಲ್ಲಿ ಪರಿಷ್ಕರಿಸಲಾಗುವುದು ಮತ್ತು ನಂತರ ತೈಲವನ್ನು ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಇತರ ಭಾರತದ ರಾಜ್ಯಗಳಿಗೆ ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.
ಪರದೀಪ್ನಿಂದ ಬರುವ ಕಚ್ಚಾ ತೈಲವು ಅಸ್ಸಾಂನ ಮೂರು ಸಂಸ್ಕರಣಾಗಾರಗಳ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಅದೆಂದರೆ ಬೊಂಗೈಗಾಂವ್, ಗುವಾಹಟಿ ಮತ್ತು ಎನ್ಆರ್ಎಲ್ ಸಂಸ್ಕರಣಾಗಾರಗಳು.
ಈ ಮೊದಲು, ಅಸ್ಸಾಂನ ಕಚ್ಚಾ ತೈಲವನ್ನು ಬಾರೌನಿಗೆ ಕಳುಹಿಸಲಾಗುತ್ತಿತ್ತು, ಆದರೆ ಈಗ 6 ಎಂಎಂಟಿ ಕಚ್ಚಾ ತೈಲವು ಅಸ್ಸಾಂಗೆ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.