ಬೆಳ್ತಂಗಡಿ : ಮಕ್ಕಳನ್ನು ಶಿಸ್ತಿನ ಜೀವನಕ್ಕೆ ಒಳಪಡಿಸದೆ ಮಾನಸಿಕ ದೃಢತೆ ಇಲ್ಲದೆ ಬೆಳೆಸಿ, ಸ್ವಂತಿಕೆಯಿಂದ ಕೆಲಸ ಮಾಡುವುದನ್ನು ಕಲಿಸದಿದ್ದರೆ ಅಡ್ಡದಾರಿ ಹಿಡಿಯುವ ಅವಕಾಶವಿದೆ. ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆಗೆ ಮಾತ್ರ ಬಳಸಬೇಕೇ ಹೊರತು ಮೋಜಿಗಾಗಿ ಅಲ್ಲ. ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದಿದ್ದರೆ ಅಪಾಯಕಾರಿ ಸಮಾಜ ನಿರ್ಮಾಣವಾಗಲಿದೆ ಎಂದು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ ಹೇಳಿದರು.
ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಲಾಖೆಗಳಲ್ಲಿ ಸ್ವಂತಿಕೆಯಿಂದ ಕೆಲಸ ಮಾಡುವ ಅವಕಾಶಗಳು ಕ್ಷೀಣಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಹೊರಟರೆ ಸ್ವ ಪ್ರತಿಷ್ಠೆಗಾಗಿ ಒತ್ತಡಗಳನ್ನು ತರುವುದರಿಂದ ಪ್ರಗತಿಯ ಸ್ವತಂತ್ರ ಹೆಜ್ಜೆಗಳನ್ನಿಡುವುದು ಸಾಧ್ಯವಾಗುತ್ತಿಲ್ಲ. ಮಾನಸಿಕವಾಗಿ ನಮ್ಮನ್ನು ದುರ್ಬಲಗೊಳಿಸುವ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ಶೆಟ್ಟಿ, ವಲಯಾಧ್ಯಕ್ಷ ಎನ್. ಎ ಗೋಪಾಲ ಶೆಟ್ಟಿ, ತಾಲೂಕು ಸಮಿತಿ ಉಪಾಧ್ಯಕ್ಷೆ ಸುಶೀಲಾ ಎಸ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣ ಕೆ. ಆಚಾರ್ಯ ಸ್ವಾಗತಿಸಿ, ಅತಿಥಿ ಪರಿಚಯಿಸಿದರು. ಕೋಶಾಧಿಕಾರಿ ರವೀಂದ್ರ ಶೆಟ್ಟಿ ಬಳೆಂಜ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.