ಉಡುಪಿ : ದಲಿತ ದೌರ್ಜನ್ಯಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವ, ದಲಿತರ ಕುಂದುಕೊರತೆಗಳ ಸಭೆಯನ್ನ ನಡೆಸದೇ ಇರುವ ಉಸ್ತುವಾರಿ ಸಚಿವರ ವಿರುದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಸ್ಕರಿಸಿ ದಲಿತರು ಪ್ರತಿಭಟನೆಯನ್ನ ನಡೆಸಿದರು.
ಎಂ.ಜಿ.ಎಂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಸಂಭ್ರಮವಾದರೆ, ಹೊರಗಡೆ ದಲಿತರ ಪ್ರತಿಭಟನೆ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯನ್ನ ಬಹಿಸ್ಕರಿಸಿದ ದಲಿತರು ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು. ದ.ಕದಲ್ಲಿ ಸುಂದರ್ ಮಲೆಕುಡಿಯ ಅವರ ಮೇಲೆ ದೌರ್ಜ್ಯನ್ಯ ನಡೆಸಿ ಕೈ ತುಂಡರಿಸಿದರೂ ಕೂಡಾ ಆರೋಪಿಯನ್ನ ಬಂಧಿಸುವಲ್ಲಿ ಇನ್ನೂ ಸಾದ್ಯವಾಗಿಲ್ಲ.
ಬನ್ನಂಜೆ ರಾಜಾ ಬಂಧನದಲ್ಲಿ ವಹಿಸಿದ ಅಸಕ್ತಿಯನ್ನ ಉಸ್ತುವಾರಿ ಸಚಿವರು ಈ ಆರೋಪಿಯ ಬಂಧನದ ವಿರುದ್ದ ವಹಿಸಲಿ, ಎರಡು ತಿಂಗಳಾದರೂ ದಲಿತರ ಕುಂದುಕೊರತೆ ಸಭೆಯನ್ನ ನಡೆಸದ ಉಸ್ತುವಾರಿ ಸಚಿವರು ದಲಿತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಇದೇ ಸಂದರ್ಬದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.