ಮೈಸೂರು: ಭಾರತದ ವಾಯುದಳದ ಮೊಟ್ಟ ಮೊದಲ ಫ್ಲೈಟ್ ಎಂಜಿನಿಯರ್ ಆಗಿ ಚಾಮರಾಜನಗರದ ಕೊಳ್ಳೇಗಾಲದ ಯುವತಿ ಆಶ್ರಿತಾ ವಿ ಒಲೆಟಿ ಆಯ್ಖೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಆಶ್ರಿತಾ ಅವರು ಕೊಳ್ಳೇಗಾಲದ ಒ ವಿ ವೆಂಕಟೇಶ್ ಬಾಬು – ಒ ವಿ ವಾಣಿ ದಂಪತಿ ಪುತ್ರಿಯಾಗಿದ್ದು, ಭಾರತದ ಪ್ರತಿಷ್ಠಿತ ಏರ್ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ನಲ್ಲಿ ಪದವಿ ಪಡೆದವರಾಗಿದ್ದಾರೆ. ಇದು ಪ್ರಪಂಚದ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿದೆ.
1976 ರಲ್ಲಿ ಈ ವಿದ್ಯಾಲಯ ಆರಂಭವಾಗಿದ್ದು, ಈ ವರೆಗೆ ಇಲ್ಲಿ 275 ಪದವೀದರರು ಮಾತ್ರವೇ ಈ ಕೋರ್ಸ್ ಅನ್ನು ಸಂಪೂರ್ಣಗೊಳಿಸಿದ್ದಾರೆ. ಈ ಕಠಿಣ ತರಬೇತಿಯನ್ನು ಆಶ್ರಿತಾ ವಿ ಒಲೆಟಿ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ ವಾಯುದಳದ ಮೊದಲ ಮಹಿಳಾ ಫ್ಲೈಟ್ ಎಂಜಿನಿಯರ್ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.