ನವದೆಹಲಿ: ರಾಷ್ಟ್ರದ ಆರೋಗ್ಯ ಸಾಮರ್ಥ್ಯಗಳು ಮತ್ತು ಮೂಲಸೌಕರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ, ಪಿಎಂ ಕೇರ್ಸ್ ನಿಧಿಯ ಅಡಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲಾದ ವೆಂಟಿಲೇಟರ್ಗಳು ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಲಭ್ಯತೆಯನ್ನು ಮೂರು ಪಟ್ಟು ಹೆಚ್ಚಿಸಿವೆ ಎಂದು ಮೂಲಗಳು ಇಂಡಿಯಾ ವರದಿ ಮಾಡಿವೆ.
ಕೋವಿಡ್-19 ಸಾಂಕ್ರಾಮಿಕಕ್ಕೂ ಮುಂಚಿತವಾಗಿ ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿದ್ದ ವೆಂಟಿಲೇಟರ್ಗಳ ಸಂಖ್ಯೆ ಸುಮಾರು 16,000 ಯುನಿಟ್ಗಳಾಗಿದ್ದರೆ, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಸುಮಾರು 43,800 ಹೊಸ ವೆಂಟಿಲೇಟರ್ಗಳನ್ನು ರಾಜ್ಯಗಳು ಮತ್ತು ಯುಟಿಗಳಿಗೆ ಕಳೆದ ವರ್ಷ ಪಿಎಂ ಕೇರ್ಸ್ ಫಂಡ್ ಸ್ಥಾಪನೆಯಾದ ಬಳಿಕ ಸರಬರಾಜು ಮಾಡಲಾಗಿದೆ.
ಈ ನಡುವೆ, ಕೋವಿಡ್-19 ಸಾಂಕ್ರಾಮಿಕಕ್ಕೂ ಮುಂಚಿತವಾಗಿ ದೇಶದ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು ವೆಂಟಿಲೇಟರ್ಗಳ ಸಂಖ್ಯೆ ಸರ್ಕಾರೇತರ ಅಂದಾಜಿನ ಪ್ರಕಾರ ಸುಮಾರು 47,500 ರಷ್ಟಿತ್ತು ಎಂದು ಗಮನಿಸಬೇಕು.
ಅಲ್ಲದೆ, ಸಾಂಕ್ರಾಮಿಕ ರೋಗಕ್ಕೂ ಮುಂಚಿತವಾಗಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ದೊಡ್ಡ ರಾಜ್ಯಗಳು ಕ್ರಮವಾಗಿ 5,800, 7,000 ಮತ್ತು 6,600 ವೆಂಟಿಲೇಟರ್ಗಳನ್ನು ಹೊಂದಿದ್ದರೂ ಸಹ ವೆಂಟಿಲೇಟರ್ಗಳ ಲಭ್ಯತೆ ಸೀಮಿತವಾಗಿತ್ತು.
ಹಲವಾರು ರಾಜ್ಯಗಳಲ್ಲಿ ಇವುಗಳನ್ನು ಸಂಪೂರ್ಣವಾಗಿ ಬಳಸಲಾಗುತ್ತಿಲ್ಲ ಎಂಬ ಸಂಗತಿ ಬೆಳಕಿಗೆ ಬಂದ ನಂತರ ವೆಂಟಿಲೇಟರ್ಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಸರ್ಕಾರ ರಾಜ್ಯಗಳನ್ನು ಒತ್ತಾಯಿಸಿದೆ. ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿರುವ ವೆಂಟಿಲೇಟರ್ಗಳ ಅಳವಡಿಕೆ ಮತ್ತು ಕಾರ್ಯಾಚರಣೆಗಳ ಬಗ್ಗೆ ತಕ್ಷಣ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಮೋದಿ ನಿನ್ನೆ ಕರೆ ನೀಡಿದ್ದಾರೆ
ವೆಂಟಿಲೇಟರ್ಗಳನ್ನು ಸರಿಯಾಗಿ ನಿರ್ವಹಿಸಲು ಆರೋಗ್ಯ ಕಾರ್ಯಕರ್ತರಿಗೆ ರಿಫ್ರೆಶ್ ತರಬೇತಿಯನ್ನು ನೀಡಬೇಕು ಎಂದರು. ಅಂತಹ ವೈದ್ಯಕೀಯ ಸಾಧನಗಳ ಸುಗಮ ಕಾರ್ಯಾಚರಣೆಗೆ ವಿದ್ಯುತ್ ಸರಬರಾಜು ಖಾತ್ರಿಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.