ಮಂಗಳೂರು: ಭಾರತದೊಂದಿಗಿನ ಸಧೃಡ ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈಟ್ ಸರಕಾರ ಎರಡು ಕಂಟೈನರ್ಗಳಲ್ಲಿ 40 ಟನ್ ಮೆಡಿಕಲ್ ಆಕ್ಸಿಜನ್, ಆಕ್ಸಿಜನ್ ಕಾನ್ಸೆನ್ಟ್ರೇಟರ್ ಅನ್ನು ಭಾರತಕ್ಕೆ ಕಳುಹಿಸಿದೆ.
ಸಮುದ್ರ ಸೇತು 2 ರ ಭಾಗವಾಗಿ ಇಂದು ಭಾರತೀಯ ನೌಕಾಸೇನೆಯ ಐಎನ್ಎಸ್ ಕೋಲ್ಕತ್ತಾ ಹಡಗು ನವಮಂಗಳೂರು ಬಂದರಿಗೆ ಆಗಮಿಸಿತು.
ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು. ಮಂಗಳವಾರ ಇನ್ನೆರಡು ಹಡಗುಗಳ ಮೂಲಕ ನಾಲ್ಕು ಕಂಟೈನರ್ ಗಳಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಗೆ ಕುವೈಟ್ ಮುಂದಾಗಿದೆ.
ಮೆಡಿಕಲ್ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ಕುವೈಟ್ ಸರಕಾರ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ಈ ಹಿಂದೆ ಭಾರತ ಕುವೈಟಿಗೆ ಎರಡು ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಿಕೊಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.