ನವದೆಹಲಿ: ಕೋವಿಡ್ -19 ಎರಡನೇ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಸ್ಯಾಮ್ಸಂಗ್ ತನ್ನ ಕೊಡುಗೆಯಾಗಿ ಸುಮಾರು 37 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ.
ವರದಿಯ ಪ್ರಕಾರ, ದಕ್ಷಿಣ ಕೊರಿಯಾದ ಟೆಕ್ ದೈತ್ಯನಾದ ಸ್ಯಾಮ್ಸಂಗ್ ನಾಗರಿಕ ಉಪಕ್ರಮಗಳ ಭಾಗವಾಗಿ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಪೂರೈಸಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೇಣಿಗೆ ನೀಡಲಿದೆ.
ಭಾರತದ ವಿವಿಧ ಪಾಲುದಾರರೊಂದಿಗೆ ಸೂಕ್ತ ಸಮಾಲೋಚನೆ ಮತ್ತು ಸ್ಥಳೀಯ ಆಡಳಿತಗಳ ತ್ವರಿತ ಅಗತ್ಯಗಳನ್ನು ನಿರ್ಣಯಿಸಿದ ನಂತರ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಯಾಮ್ಸಂಗ್ ಹೇಳಿಕೆಯಲ್ಲಿ ತಿಳಿಸಿದೆ.
ಕಂಪನಿಯು ಕೇಂದ್ರಕ್ಕೆ ಮಾತ್ರವಲ್ಲದೆ ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ 3 ಮಿಲಿಯನ್ ಡಾಲರ್ ದೇಣಿಗೆ ನೀಡಲಿದೆ.
ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ 100 ಆಮ್ಲಜನಕ ಸಾಂದ್ರಕಗಳು, 3,000 ಆಮ್ಲಜನಕ ಸಿಲಿಂಡರ್ಗಳು ಮತ್ತು ಒಂದು ಮಿಲಿಯನ್ ಲೋ ಡೆಡ್ ಸ್ಪೇಸ್ (ಎಲ್ಡಿಎಸ್) ಸಿರಿಂಜನ್ನು ಒಳಗೊಂಡಂತೆ ಸ್ಯಾಮ್ಸಂಗ್ 2 ಮಿಲಿಯನ್ ಡಾಲರ್ ಮೌಲ್ಯದ ವೈದ್ಯಕೀಯ ಸರಬರಾಜುಗಳನ್ನು ಒದಗಿಸಲಿದೆ.
ಸ್ಯಾಮ್ಸಂಗ್ ತನ್ನ ನಾಗರಿಕ ಉಪಕ್ರಮದ ಭಾಗವಾಗಿ ಲಸಿಕೆ ಲಭ್ಯವಾಗುತ್ತಿದ್ದಂತೆ, ಭಾರತದಲ್ಲಿನ ತನ್ನ 50,000 ಕ್ಕೂ ಹೆಚ್ಚು ಅರ್ಹ ಉದ್ಯೋಗಿಗಳು ಮತ್ತು ಫಲಾನುಭವಿಗಳ ವ್ಯಾಕ್ಸಿನೇಷನ್ ವೆಚ್ಚವನ್ನು ಭರಿಸಲಿದೆ.
ಏಪ್ರಿಲ್ 2020 ರಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಸ್ಯಾಮ್ಸಂಗ್ 20 ಕೋಟಿ ರೂಪಾಯಿ ಕೊಡುಗೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.