ಬೆಂಗಳೂರು: ಜಾಲಹಳ್ಳಿಯ ಏರ್ಫೋರ್ಸ್ ಸ್ಟೇಷನ್ನಲ್ಲಿ 100 ಹಾಸಿಗೆಗಳುಳ್ಳ ಕೊರೋನಾ ಆರೈಕೆ ಕೇಂದ್ರ ತೆರೆಯಲು ಭಾರತೀಯ ವಾಯುಪಡೆ ಮುಂದಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯುಪಡೆ ಸಿದ್ಧತೆ ನಡೆಸಿದೆ. ಈ ಸಂಬಂಧ ರಕ್ಷಣಾ ಸಚಿವಾಲಯದ ಪಿಆರ್ಒ ಮಾಹಿತಿ ಹಂಚಿಕೊಂಡಿದ್ದು, ಮೊದಲ ಹಂತದಲ್ಲಿ ಆಮ್ಲಜನಕದ ವ್ಯವಸ್ಥೆ ಉಳ್ಳ 20 ಹಾಸಿಗೆಗಳು ಮೇ 6 ರಿಂದ ಕಾರ್ಯನಿರ್ವಹಿಸಲಿವೆ. ಆ ಬಳಿಕ ಉಳಿದ 80 ಹಾಸಿಗೆಗಳು ಮೇ 20 ರೊಳಗಾಗಿ ಕೊರೋನಾ ಸೋಂಕಿತರ ಬಳಕೆಗೆ ದೊರೆಯಲಿದೆ ಎಂದು ತಿಳಿಸಿದೆ.
100 ಹಾಸಿಗೆಗಳಲ್ಲಿ 10 ಐಸಿಯು ಹಾಸಿಗೆಗಳು, 40 ಹಾಸಿಗೆಗಳು ಪೈಪ್ಡ್ ಆಕ್ಸಿಜನ್ ವ್ಯವಸ್ಥೆ ಹೊಂದಿರಲಿದೆ. 50 ಹಾಸಿಗೆಗಳು ಆಮ್ಲಜನಕ ಕೇಂದ್ರೀಕೃತವಾಗಿರಲಿವೆ ಎಂದು ಐಎಎಫ್ ತಿಳಿಸಿದೆ. ಈ ಆಸ್ಪತ್ರೆಯಲ್ಲಿ ಬೆಂಗಳೂರಿನ ವಾಯುಸೇನೆಯ ಕಮಾಂಡ್ ಆಸ್ಪತ್ರೆಯ ವೈದ್ಯರು, ದಾದಿಯರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಾಯುಪಡೆ ತಿಳಿಸಿದೆ.
IAF will establish a 100-bedded COVID care treatment facility at Air Force Station Jalahalli, Bengaluru for general public.First 20 beds will be operational on May 6th with oxygen concentrators while remaining 80 beds are expected to be operational by May 20:Defence PRO,Bengaluru
— ANI (@ANI) May 4, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.