ಬೆಂಗಳೂರು: ಕನ್ನಡದ ಯುವ ನಟ ಅರ್ಜುನ್ ಗೌಡ ಅವರು ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಮಾದರಿ ಕೆಲಸವೊಂದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟವರನ್ನು ಅಂತಿಮ ಸಂಸ್ಕಾರಕ್ಕಾಗಿ ಚಿತಾಗಾರಗಳಿಗೆ ತೆಗೆದುಕೊಂಡು ಹೋಗುವ ಸಲುವಾಗಿ ಆಂಬ್ಯುಲೆನ್ಸ್ ಓಡಿಸುವ ಮೂಲಕ ಅರ್ಜುನ್ ಸದ್ಯ ಸುದ್ದಿಯಲ್ಲಿದ್ದಾರೆ. ಅಂದ ಹಾಗೆ ಅರ್ಜುನ್ ಅವರಿಗೆ ಈ ಕೆಲಸಕ್ಕೆ ಪ್ರಚೋದನೆ ನೀಡಿದ್ದು, ಅವರಿಗೆ ಪ್ರತಿನಿತ್ಯ ಹಾಲು ಪೂರೈಕೆ ಮಾಡುತ್ತಿದ್ದ ವೃದ್ದೆಯ ಸಾವು.
ಆ ವೃದ್ದೆ ಕೊರೋನಾ ಸೋಂಕಿನಿಂದ ಮೃತಪಟ್ಟರು. ಅವರ ಶವವನ್ನು ಆಸ್ಪತ್ರೆಯಿಂದ ಚಿತಾಗಾರದ ವರೆಗೆ ಸಾಗಿಸಲು ಆಕೆಯ ಮೊಮ್ಮಗ ಖರ್ಚು ಮಾಡಿದ್ದು 12 ಸಾವಿರ ರೂ. ಗಳು. ಇದರಿಂದ ಬಡಜನರು ಪಡುತ್ತಿರುವ ಕಷ್ಟದ ಅರಿವಾಗಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಸದ್ಯ ಅರ್ಜುನ್ ಆಂಬುಲೆನ್ಸ್ ಚಾಲಕರಾಗಿದ್ದಾರೆ. ಪರಿಸ್ಥಿತಿ ನೋವಿನಿಂದ ಕೂಡಿದ್ದರೂ, ಜನರಿಗೆ ಸಹಾಯ ಮಾಡುತ್ತಿರುವುದು ತಮಗೆ ತೃಪ್ತಿ ನೀಡುತ್ತಿದೆ ಎಂಬುದಾಗಿಯೂ ಅರ್ಜುನ್ ಹೇಳಿದ್ದಾರೆ.
ಇನ್ನು ಇದಕ್ಕಾಗಿಯೇ ಆಂಬುಲೆನ್ಸ್ ಚಾಲನೆ, ಅದರೊಳಗಿನ ವ್ಯವಸ್ಥೆಗಳ ಬಗೆಗೂ ಅರ್ಜುನ್ ತರಬೇತಿ ಪಡೆದುಕೊಂಡಿದ್ದಾರೆ. ಕೊರೋನಾ ಸೋಂಕಿತರ ದೇಹ ಸುಡುವವರೆಗೆ ಕೆಡದಿರಲು ಐಸ್ಪ್ಯಾಕ್ ವ್ಯವಸ್ಥೆ, ತಮ್ಮ ಪಿಪಿಇ ಸೂಟ್ ಬದಲಾವಣೆ ಮೊದಲಾದ ವಿಚಾರಗಳ ಬಗೆಗೂ ಅವರು ಅರಿವು ಹೊಂದಿದ್ದಾರೆ. ಆರಂಭದಲ್ಲಿ ಇವರ ಈ ಕೆಲಸದಿಂದ ಭಯಗೊಂಡಿದ್ದ ಇವರ ತಾಯಿ ,ಸದ್ಯ ಅರ್ಜುನ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ.
ಇನ್ನು ಕೊರೋನಾ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಜುನ್ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ. ಉತ್ತಮ ಆಹಾರ ಸೇವನೆ ಮಾಡಿ. ಅನಗತ್ಯ ಓಡಾಟ ಬೇಡ. ಫಿಟ್ನೆಸ್ನತ್ತ ಗಮನ ಹರಿಸಿ. ಸಕಾರಾತ್ಮಕ ಚಿಂತನೆ ಇರಲಿ ಎನ್ನುವ ಮೂಲಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ತೆರೆಯ ಮೇಲಿನ ಈ ಸರದಾರ ಇದೀಗ ನಿಜ ಜೀವನದಲ್ಲಿ ಮಾದರಿ ನಾಯಕರಾಗಿದ್ದಾರೆ ಎಂದರೆ ಅತಿಶಯವಲ್ಲ.
Kannada Superstar Arjun Gowda dons a PPE and becomes an ambulance driver to help patients as Karnataka suffers a second wave surge.
A real Hero. https://t.co/BFVBpD2Fnl pic.twitter.com/HNu2UcFMAj
— Anand Ranganathan (@ARanganathan72) May 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.