ನವದೆಹಲಿ: ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 14 ರಂದು ಪ್ರಾರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಉತ್ತರಾಖಂಡ ಸರ್ಕಾರ ಗುರುವಾರ ರದ್ದು ಮಾಡಿದೆ.
ಕೇದಾರನಾಥ, ಬದ್ರಿನಾಥ್, ಯಮುನೋತ್ರಿ, ಮತ್ತು ಗಂಗೋತ್ರಿಗಳ ನಾಲ್ಕು ಹಿಮಾಲಯ ದೇವಾಲಯಗಳ ದ್ವಾರಗಳು ನಿಗದಿತ ದಿನಾಂಕದಂದೇ ತೆರೆಯಲ್ಪಡುತ್ತವೆ, ಆದರೆ ಭಕ್ತರ ಪ್ರವೇಶ ಇರುವುದಿಲ್ಲ. ಈ ದೇವಾಲಯಗಳಲ್ಲಿ ಆಚರಣೆಗಳು ಮತ್ತು ಪೂಜೆಗಳನ್ನು ಕೇವಲ ಪುರೋಹಿತರು ಮಾತ್ರ ಮಾಡಲಿದ್ದಾರೆ.
ಈ ಬಗ್ಗೆ ಘೋಷಣೆ ಮಾಡಿದ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ , “ಚಾರ್ ಧಾಮ್ ದೇವಾಲಯಗಳ ಪುರೋಹಿತರು ಮಾತ್ರ ಆಚರಣೆ ಮತ್ತು ಪೂಜೆ ಮಾಡುತ್ತಾರೆ. ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದ ಕಾರಣ ಜನರನ್ನು ಯಾತ್ರೆ ಕೈಗೊಳ್ಳಲು ಅನುಮತಿಸಲಾಗುವುದಿಲ್ಲ” ಎಂದಿದ್ದಾರೆ.
ದೇವಾಲಯಗಳ ಒಳಗೆ ಸ್ಥಳೀಯರನ್ನು ಸಹ ಅನುಮತಿಸಲಾಗುವುದಿಲ್ಲ ಎಂದಿದ್ದಾರೆ.
ಈ ವರ್ಷ, ಯಮುನೋತ್ರಿ ದೇಗುಲದ ದ್ವಾರವನ್ನು ಮೇ 14 ರಂದು ಮಧ್ಯಾಹ್ನ 12.15 ಕ್ಕೆ ತೆರೆಯಲಾಗುತ್ತಿದ್ದರೆ, ಗಂಗೋತ್ರಿ ದೇಗುಲದ ಬಾಗಿಲನ್ನು ಮೇ 15 ರಂದು ಅಕ್ಷಯ ತೃತೀಯದ ಸಂದರ್ಭದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ತೆರೆಯಲಾಗುತ್ತಿದೆ. ಕೇದಾರನಾಥದ ಬಾಗಿಲನ್ನು ಮೇ 17 ರಂದು ತೆರೆಯಲಾಗುತ್ತದೆ ಮತ್ತು ಮರುದಿನ ಬದ್ರಿನಾಥ್ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.