ನವದೆಹಲಿ: ಮೇ 1 ರಿಂದ ಪ್ರಾರಂಭವಾಗುವ ಮೂರನೇ ಹಂತದ ಕೋವಿಡ್ ವ್ಯಾಕ್ಸಿನೇಷನ್ಗೆ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ನಿನ್ನೆಯಿಂದ ಆರಂಭವಾಗಿದೆ. ಮೊದಲ ದಿನವೇ 1.33 ಕೋಟಿಗೂ ಹೆಚ್ಚು ಭಾರತೀಯರು ತಮ್ಮನ್ನು ಇಲ್ಲಿ ನೋಂದಾಯಿಸಿಕೊಂಡಿದ್ದಾರೆ.
ವ್ಯಾಕ್ಸಿನೇಷನ್ ಡ್ರೈವ್ನ ಮೂರನೇ ಹಂತದಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಕೋವಿಡಗ-19 ಲಸಿಕೆ ನೋಂದಣಿಯ ಮೊದಲ ದಿನ, ಅನೇಕರು ತಮ್ಮನ್ನು ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಲು ಪ್ರಯತ್ನಿಸುತ್ತಿದ್ದ ಪರಿಣಾಮ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದ ಬಗ್ಗೆಯೂ ವರದಿಯಾಗಿದೆ.
ಕೆಲವರು ಪೋರ್ಟಲ್ ಸ್ಪಂದಿಸುತ್ತಿಲ್ಲ ಎಂದು ದೂರಿದರೆ, ಇತರರು ಅದು ಕ್ರ್ಯಾಶ್ ಆಗಿದೆ ಎಂದು ದೂರಿದ್ದಾರೆ. ಸರ್ವರ್ ಕ್ರ್ಯಾಶ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿರುವುದು ತಪ್ಪು ಮತ್ತು ಅದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಂತರ ಸ್ಪಷ್ಟಪಡಿಸಿದೆ.
ಪೋರ್ಟಲ್ 383 ಮಿಲಿಯನ್ ಎಪಿಐ ಹಿಟ್ಗಳನ್ನು ಪಡೆದುಕೊಂಡಿದೆ, ಆರಂಭದಲ್ಲಿ ನಿಮಿಷಕ್ಕೆ 2.7 ಮಿಲಿಯನ್ ಹಿಟ್ ಬಂದಿತ್ತು ಮತ್ತು ಒಟ್ಟು 1.45 ಕೋಟಿ ಎಸ್ಎಂಎಸ್ಗಳನ್ನು ಯಶಸ್ವಿಯಾಗಿ ತಲುಪಿಸಲಾಗಿದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.