ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ 2ಎ (ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್. ಪುರಂವರೆಗೆ) ಮತ್ತು ಹಂತ 2 ಬಿ (ಕೆ.ಆರ್. ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ) ಒಟ್ಟು 58.19 ಕಿ.ಮೀ. ಉದ್ದದ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯ ಪೂರ್ಣ ವೆಚ್ಚ 14,788.101 ಕೋಟಿ ರೂ. ಆಗಿರುತ್ತದೆ. ಈ ಯೋಜನೆಯ ಅನುಷ್ಠಾನದೊಂದಿಗೆ ಬೆಂಗಳೂರಿಗೆ ಅತ್ಯಗತ್ಯವಾದ ಹೆಚ್ಚುವರಿ ಸಾರ್ವಜನಿಕ ಸಾರಿಗೆ ಸೌಕರ್ಯ ಲಭಿಸಲಿದೆ.
ಈ ಯೋಜನೆಯು ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ, ವ್ಯಾಪಕ ಬೆಳವಣಿಗೆ, ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಗರದಲ್ಲಿ ಭಾರಿ ನಿರ್ಮಾಣಗಳಿಂದಾಗಿ ಮತ್ತು ಕೈಗಾರಿಕಾ ಚಟುವಟಿಕೆಗಳಿಂದಾಗಿ ಸಾರಿಗೆ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದ್ದು, ಇದು ಅನಿವಾರ್ಯವಾಗಿತ್ತು ಮತ್ತು ಇದು ಜನರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರ್ವಜನಿಕ ಸಾರಿಗೆ ಒದಗಿಸುತ್ತದೆ.
ಮೆಟ್ರೊ ಯೋಜನೆಯು ಸಾಂಪ್ರದಾಯಿಕ ನಗರ ಸಾರಿಗೆ ವ್ಯವಸ್ಥೆಯಲ್ಲಿ ಒಂದು ನಾವೀನ್ಯ ಸಾರಿಗೆಯಾಗಿದೆ. ಯೋಜನೆಯು ಇತರ ನಗರ ಸಾರಿಗೆ ವ್ಯವಸ್ಥೆಯೊಂದಿಗೆ ಸಮರ್ಥ ಮತ್ತು ಪರಿಣಾಮಕಾರಿ ರೀತಿಯಲ್ಲಿ ಸಂಪರ್ಕಿತವಾಗಿರಬೇಕಾಗುತ್ತದೆ, ಇದು ವಿನ್ಯಾಸ, ತಂತ್ರಜ್ಞಾನ ಮತ್ತು ಸಾಂಸ್ಥಿಕ ನಿರ್ವಹಣೆಯ ನಾವಿನ್ಯಪೂರ್ಣ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಾಧ್ಯವಾಗುತ್ತದೆ.
The process of transforming the urban landscape continues.
In a landmark decision today, Union Cabinet gives its approval to Phases 2A (19.75 km & 13 stations) & 2B (38.44 km & 17 stations) of Bengaluru's Namma Metro at a cost of ₹14,788 cr. #BengaluruMetro pic.twitter.com/ZjL0Xetfd4
— Hardeep Singh Puri (@HardeepSPuri) April 20, 2021
The Govt has approved Bangalore Metro Rail Project Phase 2A from Central Silk Board Junction to K.R. Puram and Phase 2B from K.R. Puram to Airport via Hebbal Junction of total length 58 km. The total completion cost of the project is ₹14,788 Crore: @PiyushGoyal
— Piyush Goyal Office (@PiyushGoyalOffc) April 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.