ನವದೆಹಲಿ: 2020-21ನೇ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್ಬಿಐ) ಹರಿವಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಭಾರತೀಯ ಷೇರು ಮಾರುಕಟ್ಟೆಗಳಿಗೆ 2,74,034 ಕೋಟಿ ರೂ. ಹರಿದು ಬಂದಿದೆ. ಆ ಮೂಲಕ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳ ಮೇಲೆ ವಿದೇಶಿ ಹೂಡಿಕೆದಾರರು ಇಟ್ಟಿರುವ ವಿಶ್ವಾಸ ಸ್ಥಿರವಾಗಿದೆ ಎಂಬುದು ಪ್ರತಿಫಲನಗೊಂಡಿದೆ.
ಆರ್ಥಿಕ ಪುನಃಶ್ಚೇತನಕ್ಕೆ ವಿನೂತನ ರೀತಿಯಲ್ಲಿ ಹಲವು ಸಂಕಷ್ಟ ಪ್ಯಾಕೇಜುಗಳನ್ನು ಘೋಷಿಸುವ ಮೂಲಕ ಬೆಂಬಲ ನೀಡಿದ್ದು, ನಿರೀಕ್ಷೆಗೂ ಮೀರಿದಂತೆ ಉತ್ಕೃಷ್ಟ ರೀತಿಯಲ್ಲಿ ಎಫ್ ಪಿಐ ಒಳಹರಿವು ಹೆಚ್ಚಾಗಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಎಫ್ ಪಿಐ ಹರಿವು ಹೆಚ್ಚಳ ಮತ್ತು ಹೂಡಿಕೆಯ ವಾತಾವರಣ ಸುಧಾರಿಸುವ ಉದ್ದೇಶದಿಂದ ಸರ್ಕಾರ ಮತ್ತು ನಿಯಂತ್ರಕರು ಹಲವು ನೀತಿ ಸುಧಾರಣಾ ಕ್ರಮಗಳನ್ನು ಕೈಗೊಂಡರು. ಅದರಲ್ಲಿ, ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮ ಸರಳೀಕರಣ ಮತ್ತು ಏಕರೂಪಗೊಳಿಸುವುದು, ಸೆಬಿಯಲ್ಲಿ ನೋಂದಣಿ ಮಾಡುವ ಉದ್ದೇಶಕ್ಕೆ ಆನ್ ಲೈನ್ ಒಂದೇ ಬಗೆಯ ಅರ್ಜಿ ನಮೂನೆ(ಸಿಎಎಫ್ ) ಕಾರ್ಯಾಚರಣೆ, ಪ್ಯಾನ್ ಹಂಚಿಕೆ ಮತ್ತು ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ ತೆರೆಯುವುದು ಸೇರಿ ಹಲವು ಕ್ರಮಗಳು ಒಳಗೊಂಡಿವೆ.
ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಭಾರತೀಯ ಕಂಪನಿಗಳಲ್ಲಿ ಸರಾಸರಿ ಶೇ.24ರಿಂದ ವಲಯ ಮಿತಿಯನ್ನು ಹೆಚ್ಚಳ ಮಾಡುವುದು ಪ್ರಮುಖ ಷೇರುಗಳಲ್ಲಿ ಭಾರತೀಯ ಷೇರುಮಾರುಕಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ವೇಗವರ್ಧಕವಾಗಿದೆ. ಆ ಮೂಲಕ ನಿಷ್ಕ್ರಿಯ ಮತ್ತು ಸಕ್ರಿಯ ಎರಡೂ ಭಾರತೀಯ ಷೇರು ಮಾರುಕಟ್ಟೆಗಳಿಗೆ ಭಾರಿ ಪ್ರಮಾಣದ ಬಂಡವಾಳ ಕ್ರೋಢೀಕರಿಸಲಿವೆ.
ವಿಶ್ವಬ್ಯಾಂಕ್, ಐಎಂಎಫ್ ಮತ್ತು ಇತರೆ ಜಾಗತಿಕ ಸಂಶೋಧನಾ ಸಂಸ್ಥೆಗಳು 2021-22ನೇ ಹಣಕಾಸು ವರ್ಷದಲ್ಲಿ ಭಾರತ ಶೇ.10ರಷ್ಟು ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಿವೆ, ಹಾಗಾಗಿ ಭವಿಷ್ಯದಲ್ಲಿ ಭಾರತ ಆಕರ್ಷಕ ಹೂಡಿಕೆ ತಾಣವಾಗಿ ಮುಂದುವರಿಯಲಿದೆ ಎಂಬುದು ಬಲವಾಗಿ ಪ್ರತಿಪಾದನೆಗೊಂಡಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.