ಬೆಳ್ತಂಗಡಿ : ಕಳೆದ ಜುಲಾಕೈ 26 ರಂದು ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ಭೂ ಮಾಲಿಕ ಗೋಪಾಲಕೃಷ್ಣ ಗೌಡಎಂಬಾತ ಕಳೆಕೊಚ್ಚುವ ಯಂತ್ರದಿಂದ ಬಡ ಆದಿವಾಸಿ ಸುಂದರ ಮಲೆಕುಡಿಯರ ಕೈ ಮತ್ತು ಬೆರಳನ್ನು ತುಂಡರಿಸಿದ ಘಟನೆ ಇಡೀ ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ನಾಂದಿಯಾಗುತ್ತಿದೆ. ಬುಧವಾರ ಮೈಸೂರಿನ ಪ್ರಗತಿಪರಚಿಂತಕ, ಸಾಹಿತಿ ಕೆ. ಎಸ್. ಭಗವಾನ್ ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮ್ ಡಿ.ವೈ.ಎಫ್.ಐ. ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರ ನಿಯೋಗ ನೆರಿಯಕ್ಕೆ ಭೇಟಿ ನೀಡಿ ಸಂತ್ರಸ್ಥಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಸುಂದರ ಮಲೆಕುಡಿಯರ ಮೇಲಿನ ಘನಘೋರ ಧಾಳಿಯು ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಬುಧವಾರ ಸಾಹಿತಿ ಕೆ.ಎಸ್. ಭಗವಾನ್, ಕೆ.ಎಸ್. ಶಿವರಾಮ್ ನೇತೃತ್ವದತಂಡ ನೆರಿಯದ ಕಾಟಾಜೆಯಲ್ಲಿರುವ ಸುಂದರ ಮಲೆಕುಡಿಯರ ಮನೆಗೆ ಭೇಟಿ ನೀಡಿ ಸುಂದರ ಮಲೆಕುಡಿಯರ ಮಗ ಪೂರ್ಣೇಶ ಹಾಗೂ ಸ್ಥಳೀಯ ಆದಿವಾಸಿಗಳೊಂದಿಗೆ ಘಟನೆಯ ಬಗ್ಗೆ ತಿಳಿದುಕೊಂಡು ಸಾಂತ್ವಾನ ಹೇಳಿದ್ದಾರೆ.
ಈ ಸಂದರ್ಭ ಸಾಹಿತಿ ಕೆ.ಎಸ್. ಭಗವಾನ್ ಈ ಘಟನೆ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸವಾಲೊಡ್ಡಿದಂತೆ ಇದೆ. ಆದಿವಾಸಿಗಳು ಘಟನೆಯ ಬಗ್ಗೆ ದೃತಿ ಕೆಡದೆ ಸಂಘಟಿತರಾಗಿ ಈ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿ ಎಂದು ಕರೆ ನೀಡಿದ ಅವರು ನಿಮ್ಮ ಇಡೀ ಕುಟುಂಬದ ಜೊತೆ ರಾಜ್ಯದ ಪ್ರಗತಿಪರ ಚಳವಳಿ ಇದೆ ಧೈರ್ಯದಿಂದ ಇರಿ ಎಂದರು.
ಕೆ.ಎಸ್. ಶಿವರಾಮ್ ಮಾತನಾಡಿ ಈ ಹೋರಾಟವನ್ನು ಪ್ರಗತಿಪರ ಸಂಘಟನೆಗಳ ಜತೆ ಸೇರಿರಾಜ್ಯಾದ್ಯಂತ ನಡೆಸುತ್ತೇವೆ. ಆಗಸ್ಟ್ ೧೩ರಂದು ಮೈಸೂರಿನಲ್ಲಿ ಸಿಪಿಐಎಂ ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆಎಂದರು. ಮುನೀರ್ ಕಾಟಿಪಳ್ಳ ಮಾತನಾಡಿ ಸುಂದರ ಮಲೆಕುಡಿಯರ ಮೇಲಿನ ದೌರ್ಜನ್ಯವನ್ನು ಸಂಘಟನೆ ಸವಾಲಾಗಿ ಸ್ವೀಕರಿಸಿದ್ದು ನ್ಯಾಯ ದೊರಕುವ ತನಕ ಹೋರಾಟ ನಡೆಸಲಾಗುವುದು. ಇದು ಆದಿವಾದಿಗಳ ಮೇಲಿನ ದೌರ್ಜನ್ಯ ಕೊನೆಯಾಗಬೇಕು. ಆ ರೀತಿಯ ಹೋರಾಟಕ್ಕೆ ಆದಿವಾಸಿಗಳು ಮುನ್ನುಗ್ಗಬೇಕು ಎಂದರು.
ಈ ಸಂದರ್ಭ ಡಿವೈಎಫ್ಐನ ಜಿಲ್ಲಾ ಉಪಾಧ್ಯಕ್ಷ ಪಿ.ಕೆ. ಇಂಥಿಯಾಸ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ವಿಠಲ ಮಲೆಕುಡಿಯ, ತಾಲೂಕು ಅಧ್ಯಕ್ಷ ವಸಂತ ನಡ, ಸಂಚಾಲಕ ಶೇಖರಎಲ್., ಸಿಪಿಐಎಂ ನೆರಿಯ ಶಾಖಾ ಕಾರ್ಯದರ್ಶಿ ಲೂಯಿಸ್, ಪ್ರಗತಿಪರ ಹೋರಾಟಗಾರದಾಮೋದರ ಭಟ್, ಡಿಎಸ್ಎಸ್ ಮುಖಂಡರುಗಳಾದ ಸಂಜೀವ ಆರ್., ರಮೇಶ್ಆರ್. ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.