ನವದೆಹಲಿ: ಬ್ರಿಟಿಷರ ಕಾಲದಲ್ಲಿ ಸೇನೆಗೆ ಹಾಲನ್ನು ಒದಗಿಸುವ ವ್ಯವಸ್ಥೆಗಾಗಿ 132 ವರ್ಷಗಳ ಹಿಂದೆ ನಿರ್ಮಿತವಾದ ಹಾಲಿನ ಡೈರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಕಳೆದ 132 ವರ್ಷದಿಂದ ಭಾರತೀಯ ಸೇನೆಗೆ ಹಾಲು ಪೂರೈಸಿಕೊಂಡು ಬರುತ್ತಿದ್ದ ಡೈರಿಗಳು ಇದೀಗ ಇತಿಹಾಸದ ಪುಟ ಸೇರಲು ಸಿದ್ಧವಾಗಿವೆ. ಸೇನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಲಿಟರಿ ಡೈರಿಗಳು ಅಂಬಾಲ, ಮೀರತ್, ಕೋಲ್ಕಾತ್ತಾ, ಶ್ರೀನಗರ, ಆಗ್ರಾ, ಪಠಾಣ್ ಕೋಟ್, ಲಕ್ನೋ, ಮೀರತ್, ಅಲಹಾಬಾದ್ ಹಾಗೂ ಗುವಾಹಟಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಸುಮಾರು 20,000 ಎಕರೆ ಜಮೀನಿನಲ್ಲಿ ಈ ಡೈರಿ ವ್ಯಾಪಿಸಿಕೊಂಡಿತ್ತು ಎನ್ನಲಾಗಿದೆ.
ಬ್ರಿಟಿಷರು, ಆಡಳಿತಾವಧಿಯಾದ ಫೆಬ್ರವರಿ 1, 1889 ರಲ್ಲಿ ಮೊದಲ ಡೈರಿ ಸ್ಥಾಪಿಸಲ್ಪಟ್ಟಿತು. ಈ ಡೈರಿಗಳು ಆ ಕಾಲದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೈನಿಕರಿಗೆ ಪೌಷ್ಠಿಕ ಹಾಲು ನೀಡುವ ಸಲುವಾಗಿ ಸ್ಥಾಪಿಸಲಾಯಿತು. ತದನಂತರದಲ್ಲಿ ಭಾರತೀಯ ಸೇನೆಯಡಿ ಈ ಡೈರಿ ಕಾರ್ಯ ನಿರ್ವಹಿಸುತ್ತಿತ್ತು. ಪ್ರಸ್ತುತ ಈ ಹಾಲು ಉತ್ಪಾದನಾ ಕೇಂದ್ರವನ್ನು ಮುಚ್ಚಲಾಗಿದೆ. ಈ ಡೈರಿಗಳಲ್ಲಿ ಕೆಲಸ ಮಾಡಿದವರಿಗೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.