ನವದೆಹಲಿ: ಬೆಂಗಳೂರಿನ ಅಜೀಂ ಪ್ರೇಮ್ಜಿ ವಿವಿ, ಲೋಕನೀತಿ-ಸಿಎಸ್ಡಿಎಸ್ ʼ2016 ರಿಂದ 2018 ರ ವರೆಗೆ ರಾಜಕೀಯ ಮತ್ತು ಸಮಾಜದ ನಡುವೆ ಚುನಾವಣೆʼ ಎಂಬ ಸಂಗತಿಯನ್ನಿಟ್ಟುಕೊಂಡು ಸಮೀಕ್ಷೆ ನಡೆಸಿದ್ದು, ಈ ಸಮಿಕ್ಷೆಯಲ್ಲಿ ಕನ್ನಡಿಗರು ತಮ್ಮ ಕನ್ನಡಾಭಿಮಾನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅದಮ್ಯ ಭಾಷಾ ಪ್ರೇಮದ ಜೊತೆಗೆ ತಾವು ಈ ದೇಶದ ಹೆಸರಿನಲ್ಲಿಯೇ ಗುರುತಿಸಿಕೊಳ್ಳುವುದಕ್ಕೆ ಹೆಚ್ಚು ಒಲವು ಹೊಂದಿರುವುದು ತಿಳಿದು ಬಂದಿದೆ.
ಈ ಸಮೀಕ್ಷೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಯಾವ ಭಾಷೆಗೆ ಪ್ರಾಶಸ್ತ್ಯ ಎಂಬ ಪ್ರಶ್ನೆಗೆ 83% ಗಳಷ್ಟು ಜನರು ಕನ್ನಡಕ್ಕೇ ಹೆಚ್ಚಿನ ಆದ್ಯತೆ ನೀಡಿದ್ದಾರೆ. 9% ಜನರು ಯಾವುದೇ ಭಾಷೆಯಾದರೂ ನಡೆಯುತ್ತದೆ ಎಂದರೆ, ಇನ್ನೂ ಕೆಲವರು ಹಿಂದಿ ಭಾಷೆಗೆ ಸಮ್ಮತಿ ಸೂಚಿಸಿ, ಆಂಗ್ಲ ಭಾಷೆ ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ.
ಕರ್ನಾಟಕಕ್ಕೆ ಸಂಬಂಧಿಸಿದಂತೆ ಶೇಕಡಾವಾರುಗಳಲ್ಲಿ ನೋಡುವುದಾದರೆ, 83% ಜನರು ವ್ಯಾವಹಾರಿಕವಾಗಿ ಕನ್ನಡ ಭಾಷೆ ಮಾತನಾಡುವುದಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ಅದರ ಜೊತೆಗೆ, ರಾಷ್ಟ್ರದ ಮೂಲಕ ಗುರುತಿಸಿಕೊಳ್ಳುವಿಕೆಗೆ 34% ಜನರು ಆದ್ಯತೆ ನೀಡಿದ್ದಾರೆ. ಹಾಗೆಯೇ 83% ಗಳಷ್ಟು ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಕನ್ನಡಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. 44% ಗಳಷ್ಟು ಮಂದಿ ಆಯಾ ರಾಜ್ಯಗಳ ಭಾಷೆಗಳಲ್ಲಿಯೇ ಗುರುತಿಸಿಕೊಳ್ಳಲು ಇಚ್ಛೆ ಪಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.