ನವದೆಹಲಿ: ಖ್ಯಾತ ತಮಿಳು ನಟ ರಜನೀಕಾಂತ್ ಅವರಿಗೆ 2020 ನೇ ಸಾಲಿನ ದಾದಾ ಸಾಹೆಬ್ ಫಾಲ್ಕೆ ಪುರಸ್ಕಾರವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ತಮಿಳು ಚಿತ್ರರಂಗದ ʼಸೂಪರ್ ಸ್ಟಾರ್ʼ ಎಂದೇ ಖ್ಯಾತಿ ಪಡೆದಿರುವ ರಜನೀಕಾಂತ್ ಅವರ 50 ವರ್ಷಗಳ ಸಿನಿಮಾ ರಂಗದಲ್ಲಿನ ಸೇವೆಯನ್ನು ಗಣನೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಈ ಪುರಸ್ಕಾರವನ್ನು ಪ್ರಕಟಿಸಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, 2020 ನೇ ಸಾಲಿನ ದಾದಾ ಸಾಹೆಬ್ ಫಾಲ್ಕೆ ಪುರಸ್ಕಾರವನ್ನು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಇತಿಹಾಸ ನಿರ್ಮಾಣ ಮಾಡಿರುವ ಶ್ರೇಷ್ಟ ನಟ ರಜನೀಕಾಂತ್ ಅವರಿಗೆ ನೀಡುವುದಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ. ನಟನಾಗಿ, ನಿರ್ಮಾಪಕನಾಗಿ, ಸ್ಕ್ರೀನ್ರೈಟರ್ ಆಗಿ ರಜನೀಕಾಂತ್ ಅವರ ಕಾರ್ಯ ಮಾದರಿ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ರಜನೀಕಾಂತ್ ಅವರಿಗೆ ಟ್ವಿಟ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
Happy to announce #Dadasaheb Phalke award for 2019 to one of the greatest actors in history of Indian cinema Rajnikant ji
His contribution as actor, producer and screenwriter has been iconic
I thank Jury @ashabhosle @SubhashGhai1 @Mohanlal@Shankar_Live #BiswajeetChatterjee pic.twitter.com/b17qv6D6BP
— Prakash Javadekar (@PrakashJavdekar) April 1, 2021
Popular across generations, a body of work few can boast of, diverse roles and an endearing personality…that’s Shri @rajinikanth Ji for you.
It is a matter of immense joy that Thalaiva has been conferred with the Dadasaheb Phalke Award. Congratulations to him.
— Narendra Modi (@narendramodi) April 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.