ನವದೆಹಲಿ: ಬ್ಯಾಂಕ್ ವ್ಯವಹಾರ ಕ್ಷೇತ್ರದಲ್ಲಿನ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಎಸ್ಎಂಎಸ್ ವಿಚಾರಗಳಿಗೆ ಸಂಬಂಧಪಟ್ಟಂತೆ TRAI (Telecom Regulatory Authority India) ತನ್ನ ನಿಯಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ.
ಈ ಹಿನ್ನೆಲೆ ವ್ಯಾಪಾರ ಮತ್ತು ವ್ಯಾವಹಾರಿಕ ಸಂಘಟನೆಗಳನ್ನು ಒಳಗೊಂಡು ಬ್ಯಾಂಕುಗಳು ಸಂಬಂಧಪಟ್ಟ ದೂರುಗಳು ಏನಿದ್ದರೂ ಮಾರ್ಚ್ 31 ರೊಳಗೆ ನೀಡಬೇಕೆಂದು ತಿಳಿಸಿದೆ. ಈ ಬಗ್ಗೆ ಸ್ಪಂದಿಸದೆ ಇದ್ದಲ್ಲಿ ಏಪ್ರಿಲ್ 1 ರಿಂದ ಗ್ರಾಹಕರ ನಡುವಿನ ಸಂವಹನ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ TRAI ಎಚ್ಚರಿಕೆ ನೀಡಿದರೂ ಕೂಡ ಇದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳದ ಸಂಸ್ಥೆಗಳ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು 40 ಪ್ರಮುಖ ವ್ಯಾಪಾರಿ ಸಂಘಟನೆಗಳು ಸೇರಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸೆಬಿ (SEBI) ಕೂಡ ಗ್ರಾಹಕರಿಕೆ ಈ ಬಗ್ಗೆ ನಿಯಮಗಳನ್ನು ಪಾಲಿಸಲು ಸಂಸ್ಥೆಗಳಿಗೆ ಸೂಚಿಸಿದೆ ಎನ್ನಲಾಗಿದೆ. ಅನುಚಿತ ವಾಣಿಜ್ಯಾತ್ಮಕ ಎಸ್ಎಮ್ಎಸ್ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ TRAI ಈ ನಿಯಮವನ್ನು ಬಿಗಿಗೊಳಿಸಿದೆ ಎಂದು ಸೆಬಿ ಮಾಹಿತಿ ನೀಡಿದೆ. TRAI ಟೆಲಿಕಾಂ ವಾಣಿಜ್ಯ ಸಂವಹನಗಳ ಆದ್ಯತೆಯ ನಿಯಮಗಳು 2018 ಅನ್ನು ಉಲ್ಲೇಖಿಸಿರುವ ಸೆಬಿ, ನಿಬಂಧನೆಗಳನ್ನು ಪಾಲಿಸದಿರುವುದು ಹೂಡಿಕೆದಾರರಿಗೆ ಸಂದೇಶಗಳನ್ನು ಕಳುಹಿಸುವಲ್ಲಿ ಅಥವಾ ಪೂರೈಸುವಲ್ಲಿ ಅಡಚಣೆಯಾಗಬಹುದು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.