ನವದೆಹಲಿ: ಕಲೆಯ ಖಜಾನೆ ಎಂದೇ ಪ್ರಸಿದ್ಧಿ ಹೊಂದಿರುವ ಮಧ್ಯಪ್ರದೇಶದಲ್ಲಿನ ಖಜುರಾಹೋ ಪಟ್ಟಣವನ್ನು ಅಂತರರಾಷ್ಟ್ರೀಯ ಸಮಾವೇಶ ಹಾಗೂ ಪ್ರದರ್ಶನ ಸ್ಥಳವಾಗಿ ಅಭಿವೃದ್ಧಿಪಡಿಸಲು, ಸಮಾವೇಶ – ಪ್ರದರ್ಶನ ಸ್ಥಳವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ.
ಸಭೆಗಳು, ಸಮಾವೇಶಗಳು ಹಾಗೂ ಪ್ರದರ್ಶನವನ್ನು ಎಲ್ಲಾ ಮೂಲ ಸೌಕರ್ಯಗಳೊಂದಿಗೆ ನಡೆಸಲು ಸರ್ಕಾರ ಈ ಬಗ್ಗೆ ಕೆಲವು ನಗರಗಳನ್ನು ಗುರುತಿಸಿದೆ,ಇದರಲ್ಲಿ ಆಗ್ರಾ, ಪುಣೆ, ಅಹಮದಬಾದ್ ನಗರಗಳನ್ನು ಒಳಗೊಂಡಿದೆ ಆದರೆ ಈ ಎಲ್ಲಾ ನಗರಗಳ ಪೈಕಿ ಮಹಾರಾಷ್ಟ್ರದ ಖಜುರಾಹೋ ಮುಂಚೂಣಿಯಲ್ಲಿದೆ.
ಸಮಾವೇಶ, ಪ್ರದರ್ಶನಗಳಿಗೆ ಖಜುರಾಹೋ ಅತ್ಯುತ್ತಮ ಸ್ಥಳವಾಗಿದೆ, ಪ್ರವಾಸಿಗರಿಗೆ ಇಲ್ಲಿನ ಪ್ರವಾಸಿತಾಣಗಳ ಅಂದವನ್ನು ಸವಿಯಬಹುದು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಖಜುರಾಹೋದಲ್ಲಿ ಇತ್ತೀಚೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಮಹಾರಾಜಾ ಛತ್ರಪಾಲ್ ಕನ್ವೆನ್ಷನ್ ಸೆಂಟರ್ ಅನ್ನು ಉದ್ಘಾಟಿಸಿದರು. ಈ ಕನ್ವೆನ್ಷನ್ ಸೆಂಟರ್ನಡಿ ಬೃಹತ್ ಸಮಾವೇಶಗಳನ್ನು ಆಯೋಜಿಸಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.