ತಿರುವನಂತಪುರ: ಕೇರಳದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರಿದರೆ ಉತ್ತರ ಪ್ರದೇಶದಲ್ಲಿರುವ ʼಲವ್ ಜಿಹಾದ್ʼ ವಿರುದ್ಧದ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತಕ್ಕೇರಿದರೆ ಕೇರಳದಲ್ಲಿ ದೇಗುಲಗಳ ಆಡಳಿತವನ್ನು ನಿರ್ವಹಿಸುವ ದೇವಸ್ವಂ ಮಂಡಳಿಗಳನ್ನು ಮತ್ತೆ ರಚನೆ ಮಾಡಲಾಗುವುದು. ಅದನ್ನು ದೇವರ ನಿಜವಾದ ಭಕ್ತರಿಗೆಯೇ ಹಸ್ತಾಂತರ ಮಾಡುವುದಾಗಿಯೂ ಹೇಳಿದ್ದಾರೆ. ಈ ಎರಡೂ ಭರವಸೆಗಳು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಕೇರಳದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಅಡಕವಾಗಿರಲಿರುವುದಾಗಿ ಅವರು ಹೇಳಿದ್ದಾರೆ.
ಕೇರಳ ಲವ್ ಜಿಹಾದ್ನ ತಾಣವಾಗಿ ಮಾರ್ಪಡುತ್ತಿದೆ. ಕೇರಳದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಪ್ರಸ್ತುತ ಇರುವ ಸರ್ಕಾರವೂ ಬೆಂಬಲ ಸೂಚಿಸುತ್ತಿದೆ ಎಂದು ಅವರು ಹೇಳಿದ್ದಾರೆ. ದೇವಸ್ವಂ ಸಹ ಸಿಪಿಐ(ಎಂ)ನ ಕಾರ್ಯ ಚಟುವಟಿಕೆಗಳ ಕೇಂದ್ರಗಳಾಗಿತ್ತು. ಈಗ ಅವುಗಳನ್ನು ಮುಚ್ಚಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೇವಸ್ವಂ ಮಂಡಳಿಗಳನ್ನು ಮತ್ತೆ ರಚಿಸಿ, ಅದನ್ನು ಭಕ್ತರ ಸುಪರ್ಧಿಗೆ ನೀಡಲಾಗುವುದಾಗಿ ಹೇಳಿದ್ದಾರೆ. ಪಾರದರ್ಶಕ ಆಡಳಿತವನ್ನೂ ಬಿಜೆಪಿ ನೀಡಲಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.