ನವದೆಹಲಿ: ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರಿಗೆ ಭಾರತ ಸರ್ಕಾರ ಸೋಮವಾರ ಗಾಂಧಿ ಶಾಂತಿ ಪ್ರಶಸ್ತಿ 2020 ಅನ್ನು ಪ್ರದಾನ ಮಾಡಿದೆ. 2019ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಒಮನ್ನ ದಿವಂಗತ ರಾಜ ಸುಲ್ತಾನ್ ಖಬೂಸ್ ಬಿನ್ ಅವರಿಗೆ ನೀಡಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಗಾಂಧಿ ಶಾಂತಿ ಪ್ರಶಸ್ತಿ ಮಹಾತ್ಮ ಗಾಂಧಿಯವರ 125 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ವರ್ಷವಾದ 1995 ರಿಂದ ಭಾರತ ಸರ್ಕಾರವು ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿ. ಅಹಿಂಸೆ ಮತ್ತು ಇತರ ಗಾಂಧಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ವ್ಯಕ್ತಿಗಳು ನೀಡಿದ ಕೊಡುಗೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 26 ರಂದು ಢಾಕಾಗೆ ಭೇಟಿ ನೀಡಲಿದ್ದಾರೆ.
ರಹಮಾನ್ ಬಾಂಗ್ಲಾದ ಮೊದಲ ಅಧ್ಯಕ್ಷ ಮತ್ತು ನಂತರ ಬಾಂಗ್ಲಾದೇಶದ ಪ್ರಧಾನಿಯಾದವರು. ಆಗಸ್ಟ್ 15, 1975 ರಂದು ಅವರನ್ನು ಹತ್ಯೆ ಮಾಡಲಾಯಿತು. ರಹಮಾನ್ ಅವರನ್ನು ಬಾಂಗ್ಲಾದೇಶದ “ರಾಷ್ಟ್ರಪಿತ” ಅಥವಾ ಬಾಂಗ್ಲಾದೇಶದಲ್ಲಿ “ಮುಜೀಬ್” ಎಂದು ಕರೆಯಲಾಗುತ್ತದೆ.
ಕಳೆದ ಎರಡು ವರ್ಷಗಳ (2019 ಮತ್ತು 2020) ಪ್ರಶಸ್ತಿಯನ್ನು ಈ ಬಾರಿ ನೀಡಲಾಗಿದೆ.
ಆಧುನಿಕ ಅರಬ್ ಪ್ರಪಂಚದ ದೀರ್ಘಕಾಲದ ನಾಯಕ ಗಾಂಧಿ ಶಾಂತಿ ಪ್ರಶಸ್ತಿ 2019 ವಿಜೇತ ಸುಲ್ತಾನ್ ಕಬೂಸ್ ಕಳೆದ ವರ್ಷ ಜನವರಿಯಲ್ಲಿ ನಿಧನ ಹೊಂದಿದ್ದರು. ಅವರ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಅರಬ್ ನಾಯಕನನ್ನು ಈ ಪ್ರದೇಶಕ್ಕೆ ಶಾಂತಿಯ ದಾರಿದೀಪ ಎಂದು ಬಣ್ಣಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.