ಅಯೋಧ್ಯೆ: ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮ ಜನ್ಮಭೂಮಿ ಮಂದಿರದಲ್ಲಿ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.
ರಾಮ್ ಲಲ್ಲಾ ವಿಗ್ರಹ ಡೇರೆಯಲ್ಲಿಲ್ಲದೆ ಹೋಳಿ ಆಚರಣೆ ಮಾಡುತ್ತಿರುವುದು ಇದು ಮೊದಲ ಸಲ, ಆದರೆ ಈ ಬಾರಿ ನೈಜ ಮಂದಿರ ಸ್ಥಳದಲ್ಲೇ ಹೋಳಿ ಆಚರಣೆ ನಡೆಯಲಿದೆ.
ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಈ ಬಗ್ಗೆ ಮಾತನಾಡಿ, “ರಾಮ ಲಲ್ಲಾ ಮೂರು ದಶಕಗಳ ಕಾಲ ತಾತ್ಕಾಲಿಕ ಟೆಂಟ್ ಒಳಗೆ ಇದ್ದ ಮತ್ತು ಹಬ್ಬದಿಂದ ದೂರವಿದ್ದ. ಜನ್ಮಸ್ಥಳ ವಿಮೋಚನೆಯ ನಂತರ ಈ ವರ್ಷ ಭಕ್ತರನ್ನು ಆಶೀರ್ವದಿಸಲಿದ್ದಾನೆ” ಎಂದು ಹೇಳಿದ್ದಾರೆ.
ದೇವಾಲಯ ಟ್ರಸ್ಟ್ನ ಸದಸ್ಯ ಡಾ. ಅನಿಲ್ ಮಿಶ್ರಾ, “ಮೊಘಲ್ ರಾಜ ಬಾಬರ್ನ ಕಮಾಂಡರ್ ಮಿರ್ ಬಾಕಿ 1528 ರಲ್ಲಿ ಆವರಣದ ಮೇಲೆ ದಾಳಿ ಮಾಡಿದ ನಂತರ, ಹೋಳಿ ಆಚರಣೆಯನ್ನು ಇಲ್ಲಿ ಸ್ಥಗಿತ ಮಾಡಲಾಯಿತು ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಐನೂರು ವರ್ಷಗಳ ನಂತರ, ನಾವು ಬಣ್ಣಗಳ ಹಬ್ಬವನ್ನು ರಾಮಲಲ್ಲಾನ ಸ್ಥಳದಲ್ಲಿ ಹೋಳಿ ಆಚರಿಸಲಿದ್ದೇವೆ. ಹೊಸ ಯುಗ ಪ್ರಾರಂಭವಾಗಿದೆ” ಎಂದಿದ್ದಾರೆ.
ರಾಮ್ ಲಲ್ಲಾ ಸ್ಥಳದಲ್ಲಿ ನಡೆಯುವ ಆಚರಣೆಗಳಲ್ಲಿ ನೈಸರ್ಗಿಕ ಬಣ್ಣಗಳು ಮತ್ತು ಪರಿಮಳಯುಕ್ತ ‘ಗುಲಾಲ್’ ಅನ್ನು ಬಳಸಲಾಗುತ್ತದೆ ಎಂದಿದ್ದಾರೆ.
ಇಡೀ ದೇವಾಲಯದ ಸಂಕೀರ್ಣವನ್ನು ದೇಶದ ವಿವಿಧ ಭಾಗಗಳ ವಿವಿಧ ಬಣ್ಣಗಳ ಹೂವುಗಳಿಂದ ಅಲಂಕರಿಸಲಾಗುವುದು ಎಂದಿದ್ದಾರೆ.
ರಾಮ ಮಂದಿರ ಟ್ರಸ್ಟ್ ಈಗಾಗಲೇ ಹೋಳಿಗೆ ನಿಗದಿಪಡಿಸಿದ ಆಚರಣೆಗಳ ಕುರಿತು ಪುರೋಹಿತರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.