ನವದೆಹಲಿ: ಚೀನಾ, ಪಾಕಿಸ್ಥಾನ ಸಹಕಾರ ಸಂಸ್ಥೆ (ಎಸ್ಸಿಒ) ಎಂಬ ಎಂಟು ಸದಸ್ಯರ ಗುಂಪಿನ ಇತರ ಸದಸ್ಯರೊಂದಿಗೆ ಭಾರತ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಉಜ್ಬೇಕಿಸ್ಥಾನ್ ನ ತಾಷ್ಕೆಂಟ್ನಲ್ಲಿ ಮಾರ್ಚ್ 18 ರಂದು ನಡೆದ ಭಯೋತ್ಪಾದನಾ ವಿರೋಧಿ ರಚನೆಯ (ರೌಟ್ಸ್ ) ಕೌನ್ಸಿಲ್ನ 36ನೇ ಸಭೆಯಲ್ಲಿ “Pabbi-Antiterror-2021” ಎಂಬ ಭಯೋತ್ಪಾದನಾ ವಿರೋಧಿ ಸಮರಭ್ಯಾಸವನ್ನು ನಡೆಸುವುದೆಂದು ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ಭಾರತ, ಕಜಕಿಸ್ಥಾನ್, ಚೀನಾ, ಕಿರ್ಗಿಜ್ ಗಣರಾಜ್ಯ, ಪಾಕಿಸ್ಥಾನ, ರಷ್ಯಾ, ತಜಿಕಿಸ್ಥಾನ್, ಉಜ್ಜೇಕಿಸ್ಥಾನ್ ಮತ್ತು ರಾಟ್ಸ್ ಕಾರ್ಯಕಾರಿ ಸಭೆಯ ಪ್ರತಿನಿಧಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಟ್ಸ್ ಕೌನ್ಸಿಲ್ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ರೌಟ್ಸ್ ಕೌನ್ಸಿಲ್ನ ಸಭೆಯು ಮುಖ್ಯವಾಗಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಒಳಗೊಂಡ 2022 – 24 ರ ಸಹಕಾರದ ಕರಡು ಕಾರ್ಯಕ್ರಮವನ್ನು ಈ ಸಭೆಯಲ್ಲಿ ಅನುಮೋದಿಸಲಾಗಿದೆ.
ತಾಷ್ಕೆಂಟ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಟ್ಸ್, ಎಸ್ಸಿಒದ ಶಾಶ್ವತ ಅಂಗವಾಗಿದೆ. ಇದು ಭಯೋತ್ಪಾದನೆ, ಪ್ರತ್ಯೇಕವಾದ ಮತ್ತು ಉಗ್ರವಾದದ ವಿರುದ್ಧ ಸದಸ್ಯ ರಾಷ್ಟ್ರಗಳನ್ನು ತೊಡಗಿಸಿಕೊಂಡು, ಆ ಮೂಲಕ ಈ ಎಲ್ಲಾ ಸಮಸ್ಯೆ ನಿವಾರಿಸುವತ್ತ ಹೆಜ್ಜೆ ಹಾಕಿದೆ. ಈ ಸಂಸ್ಥೆಯ ಮುಂದಿನ ಸಭೆಯು ಸೆಪ್ಟೆಂಬರ್ನಲ್ಲಿ ಉಜ್ಜೇಕಿಸ್ಥಾನ್ ನಡೆಯಲಿದೆ. ಭಾರತ ಮತ್ತು ಪಾಕಿಸ್ಥಾನವು ಎಸ್ಸಿಒಗೆ ಪೂರ್ಣ ಪ್ರಮಾಣದ ಸದಸ್ಯರಾಗಿ 2017 ರಲ್ಲಿ ಸೇರಿಕೊಂಡಿದೆ ಮತ್ತು ಎಸ್ಸಿಒದ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಚೀನಾ, ರಷ್ಯಾ, ಕಜಕಿಸ್ಥಾನ್, ಕಿರ್ಗಿಸ್ಥಾನ್, ತಜಕಿಸ್ಥಾನ್ ಮತ್ತು ಉಜ್ಜೇಕಿಸ್ಥಾನ್ ಸೇರಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.