ದಿಬ್ರುಗಢ: ಕಾಂಗ್ರೆಸ್ ಪಕ್ಷ ಅವಕಾಶವಾದದ ರಾಜಕೀಯವನ್ನು ಪಾಲಿಸುತ್ತಿದೆ ಎಂದು ಜೆ ಪಿ ನಡ್ಡಾ ಸೋಮವಾರ ಆರೋಪಿಸಿದ್ದಾರೆ. ಅಲ್ಲದೇ, ಒಂದು ವೇಳೆ ಆ ಪಕ್ಷ ಅಧಿಕಾರಕ್ಕೆ ಬರಲು ಮತ ಚಲಾಯಿಸಿದರೆ ಅಸ್ಸಾಂ ಕತ್ತಲೆಯ ದಿನಗಳತ್ತ ಸಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ದಿಬ್ರುಗಢ ಜಿಲ್ಲೆಯ ಟಿಂಗ್ಖಾಂಗ್ನಲ್ಲಿ ನಡೆದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಜನರನ್ನು ರಕ್ಷಿಸಲು ಮತ್ತು ಸೇವೆ ಮಾಡಲು ಬಿಜೆಪಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷದ ಏಕೈಕ ಉದ್ದೇಶ ಅವಕಾಶವಾದಿ ರಾಜಕೀಯ. ಆ ಪಕ್ಷ ಕೇರಳದಲ್ಲಿ ಮುಸ್ಲಿಂ ಲೀಗ್ ಜೊತೆಗಿದೆ ಮತ್ತು ಕೇರಳದಲ್ಲಿ ಸಿಪಿಐ (ಎಂ) ವಿರುದ್ಧ ಹೋರಾಡುತ್ತಿದೆ, ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಸಿಪಿಎಂ ಜೊತೆ ಕೈಜೋಡಿಸಿದ್ದಾರೆ” ಎಂದು ನಡ್ಡಾ ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷಕ್ಕೆ ಎರಡು ಹಲ್ಲುಗಳು ಇವೆ – ಒಂದು ಪ್ರದರ್ಶಿಸಲು ಮತ್ತು ಇನ್ನೊಂದು ಅಗಿಯಲು. ಕಾಂಗ್ರೆಸ್ ತಾನು ಹೇಳುವುದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತದೆ. ಅದು ಸಮಾಜವನ್ನು ವಿಭಜಿಸುತ್ತದೆ” ಎಂದಿದ್ದಾರೆ.
“ನಿಮಗೆ ಕತ್ತಲೆ ಬೇಕಾದರೆ ಕಾಂಗ್ರೆಸ್ ಜೊತೆ ಹೋಗಿ. ಆದರೆ ನಿಮಗೆ ಅಭಿವೃದ್ಧಿ ಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿಯಿರಿ” ಎಂದು ಸಮಾವೇಶದಲ್ಲಿ ನಡ್ಡಾ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.