ನವದೆಹಲಿ: ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಇಸಿಐ)ದ ಟೆಂಡರ್ ಅಡಿಯಲ್ಲಿ 300 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಯನ್ನು ತನ್ನ ಅಂಗಸಂಸ್ಥೆ ಪಡೆದುಕೊಂಡಿದೆ ಎಂದು ಅದಾನಿ ಗ್ರೀನ್ ಎನರ್ಜಿ (ಎಜಿಇಎಲ್) ಸೋಮವಾರ ತಿಳಿಸಿದೆ.
“ಎಜಿಇಎಲ್ನ ಅಂಗಸಂಸ್ಥೆಯಾದ ಎಆರ್ಇಎಚ್ಎಫ್ಎಲ್ 1,200 ಮೆಗಾವ್ಯಾಟ್ ಐಎಸ್ಟಿಎಸ್-ಸಂಪರ್ಕಿತ ಪವನ ವಿದ್ಯುತ್ ಯೋಜನೆ (ಟ್ರಾನ್ಚೆ-ಎಕ್ಸ್) ಸ್ಥಾಪಿಸಲು ಎಸ್ಇಸಿಐ ಹೊರಡಿಸಿದ ಟೆಂಡರ್ನಲ್ಲಿ ಭಾಗವಹಿಸಿತ್ತು ಮತ್ತು ಈ ಟೆಂಡರ್ ಅಡಿಯಲ್ಲಿ 300 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಯನ್ನು ಸ್ಥಾಪಿಸಲು ಅನುಮತಿ ಪತ್ರವನ್ನು (ಎಲ್ಒಎ) ಸ್ವೀಕರಿಸಿದೆ” ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
ಹೇಳಿಕೆಯ ಪ್ರಕಾರ, ಈ ಯೋಜನೆಯ ಸಾಮರ್ಥ್ಯದ ನಿಗದಿತ ಸುಂಕವು 25 ವರ್ಷಗಳ ಅವಧಿಗೆ ರೂ 2.77 / kWh ಆಗಿದೆ.
ಇದರೊಂದಿಗೆ, ಎಜಿಇಎಲ್ನ ಒಟ್ಟು ನವೀಕರಿಸಬಹುದಾದ ಸಾಮರ್ಥ್ಯವು ಈಗ 15,165 ಮೆಗಾವ್ಯಾಟ್ ಆಗಿದೆ, ಅದರಲ್ಲಿ 3,395 ಮೆಗಾವ್ಯಾಟ್ ನವೀಕರಿಸಬಹುದಾದ ಸ್ಥಾವರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 11,770 ಮೆಗಾವ್ಯಾಟ್ ಯೋಜನೆಗಳು ಅನುಷ್ಠಾನದಲ್ಲಿವೆ.
ಅದಾನಿ ಗ್ರೀನ್ ಎನರ್ಜಿ ಎಂಡಿ ಮತ್ತು ಸಿಇಒ ವನೀತ್ ಎಸ್ ಜೈನ್ ಮಾತನಾಡಿ, “ಪವನ ಶಕ್ತಿಯು ನಮ್ಮ ವ್ಯವಹಾರ ವಿಧಾನದ ಅತ್ಯಗತ್ಯ ಭಾಗವಾಗಿದೆ ಮತ್ತು ನಮ್ಮ ಬೆಳವಣಿಗೆಯ ಯೋಜನೆಗಳಿಗೆ ಮಹತ್ವದ ಕೊಡುಗೆಯನ್ನು ನೀಡುವ ನಿರೀಕ್ಷೆಯಿದೆ. ಈ ಯೋಜನೆ ಹಸಿರು ಭವಿಷ್ಯದ ಕಡೆಗೆ ಪರಿವರ್ತನೆಗೊಳ್ಳಲು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.