ನವದೆಹಲಿ: ಮುಂದಿನ ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ ಗೇಟ್ಗಳಲ್ಲಿ ಜಿಪಿಎಸ್ ಆಧಾರಿತವಾದ ಟೋಲ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ತಿಳಿಸಿದರು.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ದೇಶದಾದ್ಯಂತ ಜಿಪಿಎಸ್ ಆಧರಿತ ವಾಹನಗಳ ಮೇಲಿರುವ ಜಿಪಿಎಸ್ ಚಿತ್ರವನ್ನು ಆಧರಿಸಿ ಹಣವನ್ನು ಸಂಗ್ರಹಿಸಲಾಗುತ್ತದೆ. ಸಮಯ ಉಳಿತಾಯ ಮತ್ತು ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡಲು 2016 ರಲ್ಲಿ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಜನರಿಗೆ ಪರಿಚಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟು ಈ ವ್ಯವಸ್ಥೆಯಲ್ಲಿ 93% ರಷ್ಟು ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಂಡಿದೆ. 7% ರಷ್ಟು ವಾಹನಗಳು ಅಳವಡಿಸಿಕೊಂಡಿಲ್ಲ ಎಂದಿದ್ದಾರೆ. ಫಾಸ್ಟ್ಯಾಗ್ ವ್ಯಾಪ್ತಿಯಡಿ ಬರದ ವಾಹನಗಳಿಂದ ಹೆಚ್ಚಿನ ಟೋಲ್ ಪಡೆಯುವ ನಿಯಮವನ್ನು ರೂಪಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.