ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆಗೊಳಿಸಿದ ಚಂದ್ರಯಾನ – 2 ಯೋಜನೆಯಲ್ಲಿನ ಆರ್ಬಿಟರ್ ಏಳು ವರ್ಷಗಳವರೆಗೂ ಕಾರ್ಯಾಚರಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.
ಬಹುನಿರೀಕ್ಷೆಯನ್ನಿಟ್ಟುಕೊಂಡು ಭೂಮಿಯಿಂದ ಹೊರಟಿದ್ದ ಚಂದ್ರಯಾನ – 2 ಯೋಜನೆಯಲ್ಲಿನ ಆರ್ಬಿಟರ್ ಇಸ್ರೋ ವಿಜ್ಞಾನಿಗಳ ಕ್ಷಮತೆಯ ನಿರೀಕ್ಷೆಯ ಹಂತವನ್ನು ದಾಟಿದೆ. ಈ ಯೋಜನೆಯ ಪ್ರಕಾರ ಆರ್ಬಿಟರ್ ಕೇವಲ ಒಂದು ವರ್ಷದವರೆಗೆ ಕಾರ್ಯ ನಿರ್ವಹಿಸಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಈ ಆರ್ಬಿಟರ್ ಸಾಮರ್ಥ್ಯ ಗಮನಿಸಿ ವಿಜ್ಞಾನಿಗಳ ತಂಡ ಇದು ಇನ್ನೂ 7 ವರ್ಷ ಕಾರ್ಯಾಚರಿಸಲಿದೆ ಎನ್ನುವ ಮಾಹಿತಿಯನ್ನು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.
ಚಂದ್ರಯಾನ – 2 ಅಪಾರ ಸಂಕೀರ್ಣವಾದ ಕಾರ್ಯಾಚರಣೆಯಾಗಿದೆ. ಈ ಯೋಜನೆಯ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಯೋಜನೆಯು ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಚಂದ್ರನ ದಕ್ಷಿಣ ಧ್ರುವದಲ್ಲಿನ ವೈಜ್ಞಾನಿಕ ಸಂಶೋಧನೆಗಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಚಂದ್ರಯಾನ – 2 ನೌಕೆಯನ್ನು 2019 ರ ಜುಲೈ 22 ರಂದು ಉಡಾವಣೆ ಮಾಡಲಾಗಿತ್ತು. 2019 ರ ಸೆಪ್ಟೆಂಬರ್ 7 ರಂದು ಚಂದ್ರನ ನೆಲದಲ್ಲಿ ಲ್ಯಾಂಡರ್ ಅಪ್ಪಳಿಸಿ ಬಹುನಿರೀಕ್ಷೆಯ ಯೋಜನೆ ಕನಸಾಗಿಯೇ ಉಳಿಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.