ನವದೆಹಲಿ: ಅಮೆಜಾನ್ ಪ್ರೈಮ್ ವೀಡಿಯೋ ತನ್ನ ಭಾರತದ ಕಾರ್ಯನಿರ್ವಹಣೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಮ್ ಸೇತು ಹಿಂದಿ ಸಿನಿಮಾಗೆ ಕೇಪ್ ಆಫ್ ಗುಡ್ ಫಿಲಮ್ಸ್, ಅಬಂಡನ್ಶಿಯಾ ಎಂಟರ್ಟೇನ್ಮೆಂಟ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಸಹ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದೆ. ಅಭಿಷೇಕ್ ಶರ್ಮಾ (ಪರಮಾಣು, ತೆರೆ ಬಿನ್ ಲಾಡೆನ್) ನಿರ್ದೇಶನ ಮತ್ತು ಡಾ. ಚಂದ್ರಪ್ರಕಾಶ್ ದ್ವಿವೇದಿ (ಪೃಥ್ವಿರಾಜ್ ಚೌಹಾಣ್) ಕ್ರಿಯಾಶೀಲ ನಿರ್ಮಾಣವಿದ್ದು, ಸಿನಿಮಾವು ಆಕ್ಷನ್-ಅಡ್ವೆಂಚರ್ ಡ್ರಾಮಾ ವಿಭಾಗದ್ದಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಐತಿಹಾಸಿಕ ಸಂಪ್ರದಾಯವನ್ನು ಆಧರಿಸಿದೆ. ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನುಶ್ರತ್ ಭರುಚಾ ಇದ್ದಾರೆ. ಥಿಯೇಟರ್ಗಳಲ್ಲಿ ಬಿಡುಗಡೆಯಾದ ನಂತರದಲ್ಲಿ, ರಾಮ ಸೇತು ಶೀಘ್ರದಲ್ಲೇ ಭಾರತದಲ್ಲಿ ಮತ್ತು 240 ಕ್ಕೂ ಹೆಚ್ಚು ದೇಶಗಳ ಪ್ರೈಮ್ ಸದಸ್ಯರಿಗೆ ಲಭ್ಯವಾಗಲಿದೆ.
ಅಮೆಜಾನ್ ಪ್ರೈಮ್ ವಿಡಿಯೋದ ನಿರ್ದೇಶಕ ಮತ್ತು ಕಂಟೆಂಟ್ ಮುಖ್ಯಸ್ಥ ವಿಜಯ್ ಸುಬ್ರಮಣ್ಯನ್ ಮಾತನಾಡಿ, ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ, ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಗ್ರಾಹಕ ಕೇಂದ್ರಿತ ದೃಷ್ಟಿಕೋನವನ್ನು ಹೊಂದಿರುತ್ತದೆ.ಭಾರತದ ಮಣ್ಣಿನ ಕಥೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ವೀಕ್ಷಕರನ್ನು ಪಡೆದುಕೊಳ್ಳುತ್ತದೆ ಮತ್ತು ನಮ್ಮ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ ಸಿನಿಮಾದ ಜೊತೆಗೆ ಸಹಭಾಗಿತ್ವ ಸಾಧಿಸುವ ಮೂಲಕ ನಾವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ವಿಕ್ರಮ್ ಮಲ್ಹೋತ್ರಾ ಮತ್ತು ಅಬಂಡನ್ಶಿಯಾ ಎಂಟರ್ಟೇನ್ಮೆಂಟ್ ಮತ್ತು ಅಕ್ಷಯ್ ಕುಮಾರ್ ಜೊತೆಗೆ ನಮ್ಮ ಸಹಭಾಗಿತ್ವವು ಈವರೆಗೂ ವಿಶಿಷ್ಟವಾಗಿದೆ ಮತ್ತು ಅತ್ಯಂತ ಯಶಸ್ವಿಯಾಗಿದೆ. ಈ ಹೆಜ್ಜೆಯ ಮೂಲಕ, ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಆಳವಾಗಿಸುವ ಮತ್ತು ಸಬಲಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಇತಿಹಾಸದ ಮೂಸೆಯಲ್ಲಿ ಅದ್ದಿದಂತಿರುವ ಅಪೂರ್ವವಾದ ತಾರಾಗಣ ಮತ್ತು ಕಥೆಯನ್ನು ಹೊಂದಿರುವ ಈ ಸಿನಿಮಾ ಮೂಲಕ, ನಮ್ಮ ಗ್ರಾಹಕರನ್ನು ಮನರಂಜಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆʼ ಎಂದಿದ್ದಾರೆ.
ನಟ ಅಕ್ಷಯ್ ಕುಮಾರ್ ʼರಾಮ ಸೇತು ಕಥೆಯು ನನ್ನನ್ನು ಎಂದಿಗೂ ಸ್ಫೂರ್ತಿ ನೀಡಿದೆ. ಇದು ಸಾಮರ್ಥ್ಯ, ಸ್ಥೈರ್ಯ ಮತ್ತು ಪ್ರೀತಿಯನ್ನು ನೀಡಿದೆ ಮತ್ತು ನಮ್ಮ ದೇಶದ ನೈತಿಕ ಮತ್ತು ಸಾಮಾಜಿಕ ರೂಪುರೇಷೆಯನ್ನು ಇದು ವಿಶಿಷ್ಟವಾಗಿ ಕಟ್ಟಿಕೊಟ್ಟಿದೆ.ಹಿಂದಿನ, ಮುಂದಿನ ಮತ್ತು ಪ್ರಸ್ತುತ ತಲೆಮಾರುಗಳ ಮಧ್ಯದ ಸೇತುವೆಯಂತೆ ರಾಮ ಸೇತು ಇದೆ. ಭಾರತೀಯ ಸಂಸ್ಕೃತಿಯ ಮಹತ್ವದ ಕಥೆಯೊಂದನ್ನು ಹೇಳುವಲ್ಲಿ ನಾನು ಭಾಗಿಯಾಗಿದ್ದೇನೆ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಈ ಕಥೆ ಹೇಳುತ್ತಿರುವ ಬಗ್ಗೆ ನನಗೆ ಖುಷಿಯಿದೆ. ಅಮೆಜಾನ್ ಪ್ರೈಮ್ ವೀಡಿಯೋ ಜೊತೆಗೆ ಈ ಕಥೆ ಜಗದಗಲ ಹರಡುತ್ತದೆ ಮತ್ತು ವಿಶ್ವಾದ್ಯಂತದ ವೀಕ್ಷರನ್ನು ಪಡೆಯುತ್ತದೆ.ʼ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಬಂಡನ್ಶಿಯಾ ಎಂಟರ್ಟೇನ್ಮೆಂಟ್ನ ಸಂಸ್ಥಾಪಕ ಮತ್ತು ಸಿಇಒ ವಿಕ್ರಮ್ ಮಲ್ಹೋತ್ರಾ ʼಭಾರತದಲ್ಲಿ ಪುರಾಣ, ಧರ್ಮ ಮತ್ತು ಇತಿಹಾಸವೆಲ್ಲವೂ ಪರಸ್ಪರ ಬೆಸೆದುಕೊಂಡಿವೆ. ಇವು ನಮ್ಮ ದೇಶದ ಬಂಧಗಳು ಮತ್ತು ಇವು ಎಂದಿಗೂ ನಮ್ಮ ಕಥೆ ಹೇಳುವ ಶೈಲಿಯ ಅಡಿಪಾಯವಾಗಿದೆ. ರಾಮ ಸೇತು ಎಂಬುದು ವಾಸ್ತವ, ವಿಜ್ಞಾನ ಮತ್ತು ಇತಿಹಾಸವನ್ನು ಒಳಗೊಂಡ ಕಥೆ. ಇದು ಭಾರತ ಶತಮಾನಗಳಿಂದ ಹೊಂದಿದ ನಂಬಿಕೆಯನ್ನು ಆಧರಿಸಿದೆ. ಅಮೆಜಾನ್ ಪ್ರೈಮ್ ವಿಡಿಯೋದ ಜೊತೆಗೆ ಯಶಸ್ವಿ ಅಮೆಜಾನ್ ಒರಿಜಿನಲ್ ಸಿರೀಸ್ ಬ್ರೀತ್ ಮತ್ತು ಬ್ರೀತ್: ಇಂಟು ದಿ ಶಾಡೋಸ್ ಹಾಗೂ ಶಕುಂತಲಾ ದೇವಿ ಮತ್ತು ಅಕ್ಷಯ್ ಕುಮಾರ್ ನಟನೆಯ ಮುಂಬರುವ ಟೆಂಟ್ಪೋಲ್ ಸಿರೀಸ್ ದಿ ಎಂಡ್ ಮೂಲಕ ಅದ್ಭುತ ಸಂಬಂಧವನ್ನು ಹೊಂದಿದ್ದೇವೆ. ಈ ಅದ್ಭುತ ಕಥೆಯನ್ನು ಹೇಳುವುದಕ್ಕಾಗಿ ಮತ್ತೊಮ್ಮೆ ಅಮೆಜಾನ್ ಜೊತೆಗೆ ಸಹಭಾಗಿತ್ವ ಸಾಧಿಸಲು ನಾನು ಉತ್ಸುಕನಾಗಿದ್ದೇನೆʼ ಎಂದು ತಿಳಿಸಿದ್ದಾರೆ.
ಥಿಯೇಟರ್ನಲ್ಲಿ ಬಿಡುಗಡೆಯಾದ ನಂತರ ರಾಮ ಸೇತು ಸಿನಿಮಾಗೆ ಅಮೆಜಾನ್ ಪ್ರೈಮ್ ವೀಡಿಯೋ ಎಕ್ಸ್ಕ್ಲೂಸಿವ್ ಸ್ಟ್ರೀಮಿಂಗ್ ಪಾರ್ಟ್ನರ್ ಆಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.