ನವದೆಹಲಿ: ಭಾರತವು ಇ-ಹೆಲ್ತ್ ಸೇವೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆರೋಗ್ಯ ಸಚಿವಾಲಯದ ಇ ಸಂಜೀವನಿ ಟೆಲಿಮೆಡಿಸಿನ್ ಸೇವೆ 30 ಲಕ್ಷ ಆರೋಗ್ಯ ಸಮಾಲೋಚನೆಯನ್ನು ಆಲಿಸಿದೆ ಎಂದು ವರದಿಗಳು ತಿಳಿಸಿವೆ.
ಕೊರೋನಾ ಸಂದರ್ಭದಲ್ಲಿ ಜನರಿಗೆ ನೆರವಾಗುವುದಕ್ಕೆಂದು ಆರಂಭಿಸಿದ ರಾಷ್ಟ್ರೀಯ ಟೆಲಿಮೆಡಿಸಿನ್ ಇ ಸಂಜೀವಿನಿ ಸೇವೆ ಜನರಲ್ಲಿ 30 ಲಕ್ಷ ಸಮಾಲೋಚನೆಗಳನ್ನು ನಡೆಸಿದೆ. ಪ್ರಸ್ತುತ, ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶಾದ್ಯಂತ ಪ್ರತಿದಿನ 35,000 ಕ್ಕೂ ಹೆಚ್ಚು ರೋಗಿಗಳು ಆರೋಗ್ಯ ಸೇವೆಗಳನ್ನು ಪಡೆಯಲು ಈ ಡಿಜಿಟಲ್ ಮಾಧ್ಯಮವನ್ನು ಬಳಸುತ್ತಿದ್ದಾರೆ.
ಟೆಲಿಮೆಡಿಸಿನ್ ಸೇವೆ ಅಂತರ್ಜಾಲವನ್ನು ಬಳಸಿಕೊಂಡು ದೂರದಿಂದಲೇ ಆರೋಗ್ಯ ಸೇವೆಗಳನ್ನು ತಲುಪಿಸುತ್ತಿದೆ. ಇದು ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವುದಲ್ಲದೆ ಸಮಯ, ಹಣವನ್ನು ಉಳಿಸುವುದರ ಜೊತೆಗೆ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸುತ್ತಿದೆ. ವೈದ್ಯರನ್ನು ಸಂಪರ್ಕಿಸಲು ಆಸ್ಪತ್ರೆಯ ಒಪಿಡಿಗಳನ್ನು ಭೇಟಿ ಮಾಡುವುದಕ್ಕಿಂತ ಸಾರ್ವಜನಿಕರು ಟೆಲಿಮೆಡಿಸಿನ್ಗೆ ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶವೊಂದು ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಡಿಜಿಟಲ್ ರೂಪದ ಇ-ಸಂಜೀವನಿಯನ್ನು ಜಾರಿಗೊಳಿಸಿರುವುದು ಇದೇ ಮೊದಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಇ-ಸಂಜೀವಿನಿ ಆರೋಗ್ಯ ಸೇವೆಗಳ ವಿತರಣೆಯಲ್ಲಿ ಭಾರಿ ಡಿಜಿಟಲ್ ಪರಿವರ್ತನೆಯನ್ನು ತಂದಿದ್ದಲ್ಲದೆ, ದೇಶದಲ್ಲಿ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.