ಕೋಲ್ಕಾತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕಗಳು ದಿನಕ್ಕೊಂದರಂತೆ ತಿರುವು ಪಡೆಯುತ್ತಿದೆ. ಕಳೆದ 10 ವರ್ಷಗಳಿಂದ ಬಂಗಾಳದ ಗದ್ದುಗೆ ಹಿಡಿದಿರುವ ಮಮತಾ ಬ್ಯಾನರ್ಜಿ, ತನ್ನ ವಿರುದ್ಧ ನಡೆಯುತ್ತಿರುವ ಬೃಹತ್ ರಾಜಕೀಯ ವಿದ್ಯಾಮಾನಗಳಿಂದ ಕಂಗೆಟ್ಟು ಕೊಡುತ್ತಿರುವ ಪ್ರತಿಕ್ರಿಯೆಗಳಿಗೆ ಚುನಾವಣಾ ಆಯೋಗ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅಭಿಯಾನದಲ್ಲಿ ವಾಗ್ದಾಳಿ ನಡೆಸುತ್ತಿದ್ದ ಸಂದರ್ಭ, ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆ ಎಂಬ ಬಲವಾದ ಆರೋಪವನ್ನು ಹೊರಿಸಿದ್ದರು. ಆಯೋಗಕ್ಕೆ ಕಳುಹಿಸಿದ ಪತ್ರದಲ್ಲಿ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಹಾಗೂ ಆಯೋಗಕ್ಕೆ ಕೊಟ್ಟ ಸಲಹೆಗಳು ಆಯೋಗವನ್ನು ಕಡೆಗಣಿಸುವ ಪ್ರಯತ್ನಗಳಾಗಿದೆ ಎಂದು ಮಾರ್ಚ್ 14 ರಂದು ಚುನಾವಣಾ ಆಯುಕ್ತ ಸುನಿಲ್ ಆರೋರಾಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು. ಇದಕ್ಕೆ ಉತ್ತರವಾಗಿ ಚುನಾವಣಾ ಆಯೋಗ ಬ್ಯಾನರ್ಜಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
ಚುನಾವಣಾ ಆಯೋಗದ ಉಪ ಆಯುಕ್ತ ಸುದೀಪ್ ಜೈನ್ ತಟಸ್ಥ ನಿಲುವನ್ನು ಪ್ರಶ್ನಿಸಿದ್ದ ಟಿಎಂಸಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೇವೆಯಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿತ್ತು. ಆದರೆ ಈ ಒತ್ತಾಯಕ್ಕೆ ಮಣಿಯದೆ ಚುನಾವಣಾ ಆಯೋಗ ಸುದೀಪ್ ಜೈನ್ ಅವರನ್ನು ಬೆಂಬಲಿಸಿತು. ಚುನಾವಣಾ ಅಭಿಯಾನದಲ್ಲಿ ಆಯೋಗವನ್ನು ಯಾರು ನಡೆಸುತ್ತಿದ್ದಾರೆ? ಅಮಿತ್ ಶಾ ಅವರೋ ಎಂದು ಮಮತಾ ಪ್ರಶ್ನಿಸಿದ್ದರು. ನಾವು ನ್ಯಾಯಯುತ ಚುನಾವಣೆಯನ್ನು ಬಯಸುತ್ತೇವೆ ಎಂದೂ ಬ್ಯಾನರ್ಜಿ ಇದೇ ಸಂದರ್ಭದಲ್ಲಿ ತಿಳಿಸಿದ್ದರು. ಈ ಆರೋಪಕ್ಕೆ ಸರಿಯಾಗಿ ಚುನಾವಣಾ ಆಯೋಗ ಮಮತಾಗೆ ಎಚ್ಚರಿಕೆ ನೀಡಿ ಸುಮ್ಮನಾಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.