ನವದೆಹಲಿ: ತಟಸ್ಥ ಮಾರುತಗಳು ಮತ್ತು ಪ್ಲಾಸ್ಮಾ ಡೈನಾಮಿಕ್ಸ್ನಲ್ಲಿನ ವರ್ತನೆಗಳ ವ್ಯತ್ಯಾಸಗಳನ್ನು ಅಧ್ಯಯನ ನಡೆಸುವ ಸಲುವಾಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಶುಕ್ರವಾರ ಆಂಧ್ರಪ್ರದೇಶದ ಶ್ರೀ ಹರಿಕೋಟ ಮೂಲದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ಡಿಎಸ್ಸಿ) ಸೌಂಡಿಂಗ್ ರಾಕೆಟ್ (ಆರ್ಹೆಚ್ -560) ಅನ್ನು ಉಡಾವಣೆಗೊಳಿಸಿದೆ.
ಈ ಸೌಂಡ್ ರಾಕೆಟ್ಗಳು ಒಂದು ಅಥವಾ ಎರಡು-ಹಂತದ ಘನ ಪ್ರೊಪೆಲ್ಲಂಟ್ಗಳನ್ನು ಹೊಂದಿರುವ ರಾಕೆಟ್ಗಳಾಗಿವೆ. ಇಸ್ರೋ ಪ್ರಸ್ತುತ ಮೂರು ವಿಭಿನ್ನ ಆವೃತ್ತಿಗಳ ರಾಕೆಟ್ಗಳನ್ನು ಹೊಂದಿದೆ, ಅವುಗಳೆಂದರೆ RH-200, RH-300-Mk-II ಮತ್ತು RH-560-Mk-II, ಇವು ನೆಲದಿಂದ 80 ರಿಂದ 475 ಕಿಲೋಮೀಟರ್ ರವರೆಗಿನ ಎತ್ತರಕ್ಕೆ 8 ರಿಂದ 100 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ.
“ಇಸ್ರೋ 1965 ರಿಂದ ಸ್ಥಳೀಯವಾಗಿ ತಯಾರಿಸಿದ ಸೌಂಡಿಂಗ್ ರಾಕೆಟ್ಗಳನ್ನು ಉಡಾವಣೆ ಮಾಡಲು ಪ್ರಾರಂಭಿಸಿತ್ತು ಮತ್ತು ಘನ ಪ್ರೊಪೆಲ್ಲಂಟ್ ತಂತ್ರಜ್ಞಾನದ ಮಾಸ್ಟರಿಂಗ್ನಲ್ಲಿ ಗಳಿಸಿದ ಅನುಭವವು ಈ ಉಡಾವಣೆಯ ಪ್ರೇರಕ ಶಕ್ತಿಯಾಗಿದೆ ” ಎಂದು ಬಾಹ್ಯಾಕಾಶ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.