ನವದೆಹಲಿ: ಕೋವಿಡ್-19 ಲಸಿಕೆ ‘ಕೋವಿಶೀಲ್ಡ್’ ನ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ 70-100 ದಶಲಕ್ಷ ಡೋಸ್ ಆಗಿದೆ, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ‘ಕೋವಾಕ್ಸಿನ್’ ವರ್ಷಕ್ಕೆ 150 ಮಿಲಿಯನ್ ಡೋಸ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಸಂಸದೀಯ ಸಮಿತಿಯೊಂದಕ್ಕೆ ತಿಳಿಸಿದೆ.
ಸೋಮವಾರ ರಾಜ್ಯಸಭೆಯಲ್ಲಿ ಈ ಬಗೆಗಿನ ವರದಿಯನ್ನು ಮಂಡಿಸಲಾಯಿತು.
ಅನುಮೋದಿತ ಎರಡು ಲಸಿಕೆಗಳಿಗೆ ಸಂಬಂಧಿಸಿದಂತೆ, ಪ್ರಸ್ತುತ ಲಸಿಕೆ ಉತ್ಪಾದನೆಯ ಸ್ಥಿತಿಯನ್ನು ಮತ್ತು ಆದ್ಯತೆಯಿಲ್ಲದ ಜನಸಂಖ್ಯೆಗೆ ಈ ಲಸಿಕೆಗಳನ್ನು ಎಷ್ಟು ಬೇಗನೆ ಲಭ್ಯವಾಗಿಸಬಹುದು ಎಂದು ತಿಳಿಯಲು ಸಮಿತಿ ಬಯಸಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಂಸದೀಯ ಸ್ಥಾಯಿ ಸಮಿತಿಯು ದೇಶವು ಆಮದುಗಳ ಮೇಲೆ ಅವಲಂಬಿತವಾದ ಮತ್ತು ರೋಗಿಗಳು ಅತಿಯಾದ ಹಣವನ್ನು ವೆಚ್ಚ ಮಾಡಬೇಕಾದ ಮ ಕೆಲವು ಅಪರೂಪದ ಕಾಯಿಲೆಗಳಿಗೆ ಪರಿಹಾರವನ್ನು ಅಭಿವೃದ್ಧಿಪಡಿಸುವ ಬಗ್ಗೆ ಆಳವಾಗಿ ಅನ್ವೇಷಿಸಲು ಡಿಬಿಟಿಗೆ ಕರೆ ನೀಡಿದೆ.
ದೇಶದಲ್ಲಿ ಕರೋನವೈರಸ್ ವಿರುದ್ಧದ ಇತರ ಮೂವತ್ತು ಲಸಿಕೆಗಳು ಪ್ರಯೋಗದ ವಿವಿಧ ಹಂತಗಳಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.