ಬೆಳ್ಮಣ್: ಕಾರ್ಕಳ -ಪಡಬಿದ್ರಿಯ ನಡುವಿನ ರಾಜ್ಯ ಹೆದ್ದಾರಿ ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿದೆ. ಇದೇ ವ್ಯಾಪ್ತಿಯ ಸುಮಾರು 6 ಕಿ.ಮಿ. ವರೆಗಿನ ರಸ್ತೆಯು ವಾಹನ ಚಾಲಕರಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿದೆ.
ಪಡುಬಿದ್ರಿಯಿಂದ ಬೆಳ್ಮಣ್ಗೆ ಬರುವ ಹೆದ್ದಾರಿಯಲ್ಲಿರುವ ನೀರ್ಚಾಲು ಎಂಬಲ್ಲಿನ ತಿರುವು ಅಪಘಾತಕ್ಕೆ ಕಾರಣವಾಗಿದೆ. ಇಳಿಜಾರಿನಿಂದ ಮೇಲ್ಮುಖವಾಗಿ ಏರು ತಿರುವು ಹೊಂದಿದ್ದು, ವೇಗವಾಗಿ ಚಲಾಯಿಸುವ ವಾಹನ ಚಾಲಕರನ್ನು ಈ ಕಡಿದಾದ ತಿರುವು ರಸ್ತೆ ತಬ್ಬುಬ್ಬುಗೊಳಿಸುತ್ತಿದೆ. ನಿಯಂತ್ರಣ ತಪ್ಪಿ ವಾಹನಗಳು ಪಲ್ಪಿಯಾಗುತ್ತಿದೆ. ಇಲ್ಲಿ ಬೈಕ್, ಟಿಪ್ಪರ್, ಬಸ್ಸುಗಳು ಅಪಘಾತಕ್ಕಿಡಗುವುದು ಸರ್ವೇಸಾಮಾನ್ಯ. ಅಗಲಿ
ಇಲ್ಲಿ ಹಲವು ವರ್ಷಗಳಿಂದ ನೂರಕ್ಕೂ ಮಿಕ್ಕಿ ಅಪಘಾತದಿಂದ ಸಾವು, ನೋವು ಸಂಭವಿಸಿವೆ. ಈ ಹಿಂದೆ ಹಾಳೆಕಟ್ಟೆಯ ನಿವಾಸಿ ಸುರೇಶ್ ಅಧಿಕಾರಿ ಸಹಿತ 3 ಜನರನ್ನು ಇದೇ ರಸ್ತೆ ಬಲಿ ತಗೆದುಕೊಂಡಿದೆ. ಬೆಳುವಾಯಿ ಖ್ಯಾತ ವೈದ್ಯರಾದ ಡಾ. ಪಾಂಡುರಂಗ ಶೆಟ್ಟಿಯವರು ಇದೇ ಜಾಗದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಬಸ್ಸುಗಳು ಹೊಂಡಕ್ಕೆ ಬಿದ್ದು ಡ್ರೈವರ್ಗಳು ಸ್ಥಳದಲ್ಲಿ ಮೃತಪಟ್ಟ ಘಟನೆಗಳು ನಡೆದಿವೆ. ಇದಕ್ಕೆ ಮೂಲ ಕಾರಣ ಕಡಿದಾದ ತಿರುವಿನಿಂದ ಕೂಡಿದ ಇಲ್ಲ್ಲಿನ ರಸ್ತೆಯ ಇಳಿಜಾರು ಮತ್ತು ಏರುಮುಖ.
ವಾಹನ ಚಾಲಕರು ಎರಡೂ ಕಡೆಯಿಂದ ಅತಿ ವೇಗದಲ್ಲಿ ಬರುವಾಗ ಇಬ್ಬರಿಗೂ ವಾಹನಗಳು ಗೋಚರಕ್ಕೆ ಬಾರದ ಎದರು-ಬದುರಾದಗ ನಿಯಂತ್ರಣ ತಪ್ಪಿ ನೇರವಾಗಿ ಪಕ್ಕದ ಹೊಂಡಕ್ಕೆ ಬಿದ್ದು, ಇಲ್ಲ ಪಲ್ಟಿಯಾಗಿ ಅಪಘಾತವಾಗುತ್ತಿದೆ. ಇಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಅಪಘಾತಕ್ಕೆ ಇಲ್ಲಿನ ಸ್ಥಳಿಯರು ರಸ್ತೆಯ ಪಕ್ಕದಲ್ಲಿ ಇರುವ ಮಹಾಮ್ಮಯಿಯ ಮಾರಿಗುಡಿಯ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. ಅ ಜಾಗ ಮಾರಿಗುಡಿಯ ಗಡು ಪ್ರದೇಶವಾದ ಕಾರಣ ಬಲಿ ಪಡೆದುಕೊಳ್ಳುತ್ತಿದೆ ಎಂಬುದೇ ಇಲ್ಲಿವರ ನಂಬಿಕೆ.
ಶಿರ್ವದಿಂದ ಬರುವ ಏರುಮುಖ ರಸ್ತೆ, ಕಾರ್ಕಳ- ಪಡುಬಿದ್ರೆ ಕಡೆಯಿಂದ ಬರುವ ರಸ್ತೆ, ಒಂದಕ್ಕೊಂದು ಕೂಡುವುದು ಪೇಟೆಯ ಮುಖ್ಯ ಜಂಕ್ಷನ್ನಲ್ಲಿ ಮೂರು ಕಡೆಯ ವಾಹನಗಳು ಮುಖಾಮುಖಿಯಾಗುವ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗುತ್ತಿವೆ. ಪೇಟೆಯ ರಸ್ತೆ ಸಾಕಷ್ಟು ಅಗಲಿಕರಣಗೊಳ್ಳದೆ ಕಿರಿದಾಗಿರುವುದರಿಂದ ಕಾರಣ ಡಿವೈಡರ್ ನಿರ್ಮಿಸಲು ಜಾಗನೇ ಇಲ್ಲದಂತಾಗಿದೆ. ಜನನಿಬಿಡ ಬಸ್ಸು ನಿಲ್ದಾಣ, ಅಲ್ಲದೆ ಹೆದ್ದಾರಿಯಾದ್ದರಿಂದ ಇಲ್ಲಿ ಹಂಪ್ ನಿರ್ಮಿಸುವಂತಿಲ್ಲ. ಅದರಿಂದ ವೇಗ ಮಿತಿ ಇಲ್ಲದಿರುವುದರಿಂದ ಜಂಕ್ಷನಲ್ಲಿ ಅಪಘಾತಕ್ಕೆ ನಡೆಯುವುದಕ್ಕೆ ಕಾರಣವಾಗಿದೆ.
ಪೇಟೆಯ ಜಂಕ್ಷನ್ಗೆ ಬರುವಲ್ಲಿ ಹಂಪ್ಗಳನ್ನು ಹಾಕಬೇಕು, ಶಿರ್ವದ ಕಡೆಯಿಂದ ಬರುವ ಏರು ರಸ್ತೆಯ ಕೆಳಭಾಗದಲ್ಲಿ ಸಣ್ಣ ಸರ್ಕಲ್ ನಿರ್ಮಿಸಿದರೆ ಅಪಘಾತವನ್ನು ತಡೆಯಬಹುದು. ಕಿರಿದಾದ ರಸ್ತೆಯಲ್ಲಿ ಅಡ್ಡದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿರ್ಬಂಧಿಸಬೇಕು. ಈ ಹಿಂದೆ ಬೆಳ್ಮಣ್ನಲ್ಲಿ ಪೊಲೀಸ್ ಔಟ್ಪೋಸ್ಟ್ ಕಾರ್ಯಾಚರಿಸುತ್ತಿತ್ತು. ಕಾರಣಾಂತರದಿಂದ ನಿಂತಿದ್ದು, ಇದೀಗ ಪುನಾರಂಬಿಸಬೇಕಾಗಿದೆ. ಕಾರ್ಕಳ, ಪಡುಬಿದ್ರೆ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಪ್ರಯತ್ನಪಟ್ಟಿದ್ದು ಶ್ಲಾಘನೀಯ. ದುರದೃಷ್ಟವಶಾತ್ ಹೆದ್ದಾರಿಯ ಅನೇಕ ಕಡೆ ಕಡಿದಾದ ತಿರುವುಗಳು ಇಲಾಖೆಗೆ ಅವೈಜ್ಞಾನಿಕವಾಗಿ ಪರಿಗಣಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.