ನವದೆಹಲಿ: ಹ್ಯುಂಡೈ ಕಾರು ತಯಾರಿಕಾ ಸಂಸ್ಥೆಯು ಭಾರತದಲ್ಲಿ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವತ್ತ ಗಮನಹರಿಸಿದೆ. ದಕ್ಷಿಣ ಕೊರಿಯಾದ ಹ್ಯುಂಡೈ ಎಲೆಕ್ಟ್ರಿಕ್ ವಾಹನ ಉತ್ಪಾದನೆಯನ್ನು ಕೇಂದ್ರೀಕರಿಸಿ ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 3,200 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಭಾರತದಲ್ಲಿ 25 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಹ್ಯುಂಡೈ, ವಾಹನಗಳ ವಿಭಾಗದಲ್ಲಿ ಶೇ 17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಕೂಡ ಕಂಪನಿಯ ಹೂಡಿಕೆಯ ಯೋಜನೆಯು ಮಹತ್ವದ್ದಾಗಿದೆ. ಎಲೆಕ್ಟ್ರಿಕ್ ಕ್ಷೇತ್ರವು ಭವಿಷ್ಯದಲ್ಲಿ ಬೆಳವಣಿಗೆಯ ಕೇಂದ್ರಬಿಂದುವಾಗಿರಬೇಕು ಎಂದು ಕಂಪನಿ ನಿರ್ಧರಿಸಿದೆ. ಸ್ಥಳೀಯವಾಗಿ ತಯಾರಿಸಲಿರುವ ‘ಕೈಗೆಟುಕುವ’ ಎಲೆಕ್ಟ್ರಿಕ್ ಕಾರ್ಗಾಗಿ ರೂ. 1,000 ಕೋಟಿ ಅನ್ನು ಕಂಪನಿ ಹೂಡಿಕೆ ಮಾಡಲಿದೆ. ಹಾಗೂ ಈ ಯೋಜನೆಯಲ್ಲಿ ಕ್ರಿಯಾ ಪಾಲುದಾರಿಕೆಯನ್ನು ಪಡೆಯುವ ಪ್ರಕ್ರಿಯೆಯನ್ನು ಬೇಗನೆ ಮುಗಿಸಲಿದೆ.
“ನಾವು ಕೈಗೆಟುಕುವ ಮತ್ತು ಸಮರ್ಪಕವಾದ ಸೇವೆಯನ್ನು ಜನರಿಗೆ ನೀಡಬೇಕು. ಭವಿಷ್ಯದಲ್ಲಿ ವಿದ್ಯುದೀಕರಣವು ಮುಖ್ಯ ಆಧಾರಸ್ತಂಭವಾಗಲಿದೆ ಎಂದು ನಾವು ಭಾವಿಸುತ್ತಿರುವುದರಿಂದ ನಾವು ಈ ಅಂಶದಲ್ಲಿ ವಿವಿಧ ಅಧ್ಯಯನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ”ಎಂದು ಎಂ ಡಿ ಎಸ್ ಎಸ್ ಕಿಮ್ ಹೇಳಿದರು.
ಹ್ಯುಂಡೈ ಕಂಪನಿಯು ಯೋಜಿಸಿದ ಹೊಸ ವಿನ್ಯಾಸದ ವಾಹನವನ್ನು ಕಂಪನಿಯೂ ಬಹಿರಂಗಪಡಿಸದಿದ್ದರೂ, ಮಾರುಕಟ್ಟೆಯಲ್ಲಿನ ಪ್ರಸ್ತುತ ಇರುವ ವಿನ್ಯಾಸದನುಗುಣವಾಗಿ ಮಿನಿ ಎಸ್ಯುವಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.