ನವದೆಹಲಿ: ಕೇರಳದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಕ್ರೂರತೆಯನ್ನು ಮತ್ತೊಂದು ಹಿಂಸಾಚಾರದ ಘಟನೆ ತೆರೆದಿಟ್ಟಿದೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ- ಮಾರ್ಕ್ಸ್ವಾದಿಯ 50 ಕ್ಕೂ ಹೆಚ್ಚು ಗೂಂಡಾಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಲ್ವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಸಿಪಿಎಂನ ನೆಟ್ಟೂರು ಶಾಖೆಯ ಕಾರ್ಯದರ್ಶಿ ಅಂಬಾಟ್ ಅಶೋಕನ್ ಎಂಬ ಸಿಪಿಎಂ ನಾಯಕನನ್ನು ಬಂಧಿಸಲು ಹೋದಾಗ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಲಾಯಿತು. ಅಶೋಕನ್ ಅವರು ಬಿಜೆಪಿ ಮುಖಂಡರ ವಿರುದ್ಧದ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅವರು ವಿರುದ್ಧ ದೂರು ದಾಖಲಿಸಲಾಗಿದೆ.
ಸಿಪಿಎಂ ನಾಯಕನನ್ನು ಬಂಧಿಸಲು ನ್ಯಾಯಾಲಯ ವಾರಂಟ್ ಪಡೆದಿದ್ದ ಕುಟ್ಟಿಯಾಡಿ ಎಸ್ಐ ಅನೀಶ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಭಾನುವಾರ ಅಶೋಕನ್ ಮನೆಗೆ ತಲುಪಿದ್ದರು. ಆದರೆ, ಸಿಪಿಎಂ ಪಕ್ಷದ ಕಾರ್ಯಕರ್ತರ ಗುಂಪೊಂದು ಆಗಲೇ ಅಲ್ಲಿ ಜಮಾಯಿಸಿ ಅಶೋಕನ್ ಅನ್ನು ಬಲವಂತವಾಗಿ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಿತು. ಈ ವೇಳೆ ಎಸ್ಐ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಪೊಲೀಸರ ಮೂಗಿಗೆ ಗಾಯವಾಗಿದ್ದು, ಗಲಾಟೆಯಲ್ಲಿ ಪೊಲೀಸ್ ಜೀಪ್ ಹಾನಿಯಾಗಿದೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ನಂತರ, ಕುಟ್ಟಿಯಾಡಿ ಪೊಲೀಸರು ಸಿಪಿಎಂ ಗೂಂಡಾಗಳ ವಿರುದ್ಧ ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶ ಮತ್ತು ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಯತ್ನದ ಪ್ರಕರಣ ದಾಖಲು ಮಾಡಿದ್ದಾರೆ. ಕೇರಳ ಪೊಲೀಸರು ಎಫ್ಐಆರ್ನಲ್ಲಿ 50 ಕ್ಕೂ ಹೆಚ್ಚು ಸಿಪಿಎಂ ಕಾರ್ಯಕರ್ತರನ್ನು ಹೆಸರಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ರಾಜ್ಯದ ಆಡಳಿತಾರೂಢ LDF ಒಕ್ಕೂಟದಲ್ಲಿ ಸಿಪಿಎಂ ಪ್ರಮುಖ ಪಕ್ಷವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.