ನವದೆಹಲಿ: ಭಾರತವು ತನ್ನ ಕೊರೋನಾ ಯೋಧರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಇಂದಿನಿಂದ ನೀಡಲು ಪ್ರಾರಂಭಿಸಲಿದೆ. ಈಗಾಗಲೇ ಮೊದಲ ಡೋಸ್ ಅನ್ನು ಬಹುತೇಕ ಕೊರೋನಾ ಯೋಧರಿಗೆ ನೀಡಲಾಗಿದೆ.
ಜನವರಿ 16 ರಂದು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭವಾಗಿದ್ದು, 28 ದಿನಗಳ ಹಿಂದೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳ ಮೊದಲ ಡೋಸ್ ಪಡೆದ ಜನರಿಗೆ ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು ಇಂದಿನಿಂದ ನೀಡಲಾಗುತ್ತದೆ.
ಸರ್ಕಾರಿ ತಜ್ಞರ ಪ್ರಕಾರ, ಸ್ವೀಕರಿಸುವವರು ನಿಖರವಾಗಿ 28 ದಿನಗಳ ನಂತರವೇ ಎರಡನೇ ಡೋಸ್ ತೆಗೆದುಕೊಳ್ಳಬೇಕಾಗಿಲ್ಲ ಅಗತ್ಯವಿಲ್ಲ. ಎರಡನೇ ಡೋಸೇಜ್ ಅನ್ನು ಮೊದಲ ಡೋಸ್ ಪಡೆದ ನಾಲ್ಕರಿಂದ ಆರು ವಾರಗಳೊಳಗೆ ಪಡೆಯಬಹುದು.
“ಎರಡನೇ ಡೋಸ್ ಅನ್ನು ನಾಲ್ಕರಿಂದ ಆರು ವಾರಗಳ ನಡುವೆ ಯಾವುದೇ ಸಮಯದಲ್ಲಿ ನೀಡಬಹುದು. ಅದು ನಮ್ಮಲ್ಲಿರುವ ವಿಂಡೋ ಅವಧಿ”ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಹೇಳಿದ್ದಾರೆ.
ಡಾ. ಪಾಲ್ ಸ್ವತಃ ಜನವರಿ 16 ರಂದು ಕೊವಾಕ್ಸಿನ್ ನ ಮೊದಲ ಡೋಸ್ ಪಡೆದಿದ್ದಾರೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಆರಂಭವಾದ ಮೊದಲ ದಿನ 2,02,000 ಜನರಿಗೆ ಕೋವಿಡ್ -19 ಲಸಿಕೆಗಳ ಮೊದಲ ಡೋಸ್ ನೀಡಲಾಯಿತು.
ಇಲ್ಲಿಯವರೆಗೆ, ಭಾರತವು 7.8 ಮಿಲಿಯನ್ ಜನರಿಗೆ ಲಸಿಕೆಯ ಮೊದಲ ಡೋಸ್ ನೀಡಿದೆ ಮತ್ತು ಜುಲೈ ಅಂತ್ಯದ ವೇಳೆಗೆ 300 ಮಿಲಿಯನ್ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.