ನವದೆಹಲಿ: ಜಾಗತಿಕ ಮಟ್ಟದಲ್ಲಿ ತನ್ನ ತಾರತಮ್ಯದ ಸೆನ್ಸಾರ್ಗಾಗಿ ಪ್ರಸ್ತುತ ವಿವಾದದ ಕೇಂದ್ರ ಬಿಂದು ಆಗಿರುವ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ 2020 ರಲ್ಲಿ $1.14 ಬಿಲಿಯನ್ ನಷ್ಟವನ್ನು ವರದಿ ಮಾಡಿದೆ.
ಜಾಗತಿಕ ಕೊರೋನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಈ ಬೆಳವಣಿಗೆ ಕಂಡುಬಂದಿದೆ. ಪ್ರಸ್ತುತ ಟ್ವಿಟರ್ ಭಾರತದಲ್ಲಿ ಕೃಷಿ ವಿರೋಧಿ ಕಾಯ್ದೆಯ ಪ್ರತಿಭಟನೆಗೆ ಸಂಬಂಧಿಸಿದಂತೆ ಹಿಂಸಾಚಾರವನ್ನು ಪ್ರಚೋದಿಸುವ ಖಾತೆಗಳನ್ನು ನಿಷೇಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಭಾರತ ಸರ್ಕಾರದೊಂದಿಗೆ ಜಿದ್ದಾಜಿದ್ದಿ ನಡೆಸುತ್ತಿದೆ.
ವರದಿಗಳ ಪ್ರಕಾರ, ಟ್ವಿಟರ್ನ ವೆಚ್ಚಗಳು ವರ್ಷದಿಂದ ವರ್ಷಕ್ಕೆ 19%ರಷ್ಟು ಹೆಚ್ಚಾಗಿದೆ, ಇದರ ಪರಿಣಾಮವಾಗಿ ಒಟ್ಟು ವೆಚ್ಚ $3.69 ಬಿಲಿಯನ್ಗೆ ಏರಿದೆ. ಅದೇ ವೇಳೆ, ಅದರ ಆದಾಯವ $3.72 ಬಿಲಿಯನ್ ಆಗಿದೆ, ಇದು ವರ್ಷಕ್ಕೆ 7% ಹೆಚ್ಚಾಗಿದೆ. ಕಂಪನಿಯು $27 ಮಿಲಿಯನ್ ಕಾರ್ಯಾಚರಣಾ ಆದಾಯವನ್ನು ದಾಖಲಿಸಿದ್ದರೂ, ಅದರ ಅಂತಿಮ ಫಲಿತಾಂಶಗಳು ಬಡ್ಡಿ ವೆಚ್ಚಗಳು ಮತ್ತು ತೆರಿಗೆ ಬಾಧ್ಯತೆಗಳಿಂದಾಗಿ $ 1,135,626,000 ನಿವ್ವಳ ನಷ್ಟವನ್ನು ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.