ಮಂಗಳೂರು: ಕರಾವಳಿಯ ಕಂಬಳ ಜಾನಪದ ಕ್ರೀಡೆಯಲ್ಲಿ ಈ ಹಿಂದೆ ದಾಖಲೆ ನಿರ್ಮಿಸಿದ್ದ ಶ್ರೀನಿವಾಸ ಗೌಡರ ದಾಖಲೆಯನ್ನು ಮುರಿದು ಬೈಂದೂರಿನ ವಿಶ್ವನಾಥ್ ದೇವಾಡಿಗ (23) ಅವರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಮಂಗಳೂರಿನ ಕಿನ್ನಿಗೋಳಿಯ ಐಕಳದಲ್ಲಿ ನಡೆದ ಕಂಬಳದಲ್ಲಿ ವಿಶ್ವನಾಥ್ ಅವರು ಕೋಣಗಳ 100 ಮೀ. ಓಟವನ್ನು 9.15 ಸೆಕೆಂಡು ಗಳಲ್ಲಿ ಮುಗಿಸಿ ನೂತನ ದಾಖಲೆ ಬರೆದಿದ್ದಾರೆ. ಈ ಹಿಂದೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿವಾಸ ಗೌಡರ (9 ನಿಮಿಷ 55 ಸೆಕೆಂಡ್) ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಸಾಧಕ ವಿಶ್ವನಾಥ್ ದೇವಾಡಿಗ, ಬಾಲ್ಯದಿಂದಲೇ ನನಗೆ ಕಂಬಳವೆಂದರೆ ಆಸಕ್ತಿ. ಚಿಕ್ಕಂದಿನಿಂದಲೂ ಕಂಬಳ ವೀಕ್ಷಿಸುತ್ತಿದ್ದೆ. ಎಸ್ಎಸ್ಎಲ್ಸಿ ಮುಗಿದ ಬಳಿಕ ಮುಂಬೈಗೆ ತೆರಳಿ ಅಲ್ಲಿನ ಕ್ಯಾಂಟೀನ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಆದರೆ ಸಿಟಿ ಜೀವನಶೈಲಿ ಅಷ್ಟಾಗಿ ಇಷ್ಟವಿಲ್ಲದ ಕಾರಣ ಮತ್ತೆ ಊರಿಗೆ ಹಿಂದಿರುಗಿ ಹೆತ್ತವರು, ಒಡಹುಟ್ಟಿದವರ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಿದ್ದೇನೆ. ಮನೆಗೆ ಬಂದಾಗೆಲ್ಲಾ ಕೋಣಗಳನ್ನು ಬೆಳೆಸಲು ಆರಂಭಿಸಿದೆ. ಕಂಬಳದ ಉತ್ಸಾಹಿ ಮಾಲಾ ಕರುಣಾಚಾರಿ, ಸುರೇಶ್ ಕಡಿನಾಟಾರ್, ವೆಂಕಟ್ ಪೂಜಾರಿ ಅವರೇ ನನಗೆ ಪ್ರೇರಣೆ ಎಂದು ತಿಳಿಸಿದ್ದಾರೆ.
ಕಳೆದ 7 ವರ್ಷಗಳಿಂದ ಇವರು ಕಂಬಳದಲ್ಲಿ ಭಾಗವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.