ನವದೆಹಲಿ: 2030 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕನಾಗಿ ಹೊರಹೊಮ್ಮಲಿದೆ. ಮುಂದಿನ ಎರಡು ದಶಕಗಳಲ್ಲಿ ಭಾರತದ ಇಂಧನ ಆಧಾರಿತ ಬೇಡಿಕೆ ಪ್ರಗತಿಯು 25%ರಷ್ಟು ಹೆಚ್ಚಳವಾಗಲಿದ್ದು, ಈ ಮೂಲಕ ಯುರೋಪಿಯನ್ ಒಕ್ಕೂಟವನ್ನು ಹಿಂದಿಕ್ಕಲಿದೆ ಎಂದು ವರದಿ ಹೇಳಿದೆ.
ಬಿಡುಗಡೆಯಾಗಿರುವ ಇಂಡಿಯಾ ಎನರ್ಜಿ ಔಟ್ಲುಕ್ 2021 ಪ್ರಕಾರ, ಪ್ರಸ್ತುತದ ರಾಷ್ಟ್ರೀಯ ನೀತಿ ಸನ್ನಿವೇಶದ ಅಡಿಯಲ್ಲಿ 2040 ರ ವೇಳೆಗೆ ಭಾರತದ ಜಿಡಿಪಿ ಅಂದಾಜು 8.6 ಟ್ರಿಲಿಯನ್ ಡಾಲರ್ಗೆ ವಿಸ್ತರಿಸುವುದರಿಂದ ಇಂಧನ ಬಳಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
2040 ರ ವೇಳೆಗೆ ಮತ್ತೊಂದು ಜಪಾನ್ಗೆ ಸಮನಾಗಿರುವ ಜಿಡಿಪಿ ಬೆಳವಣಿಗೆಯ ದರವು ವಿಶ್ವ ಆರ್ಥಿಕತೆಗೆ ಸೇರಲಿರುವುದು ಈ ನಿರೀಕ್ಷೆಗೆ ಆಧಾರವಾಗಿದೆ ಎನ್ನಲಾಗಿದೆ.
ಭಾರತದ ಬೆಳೆಯುತ್ತಿರುವ ಇಂಧನ ಅಗತ್ಯಗಳು ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಯ ಕುಸಿತದಿಂದಾಗಿ ಫೋಸಿಲ್ ಫ್ಯೂಲ್ ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಲಿದೆ.
ಹೀಗಾಗಿಯೇ ಕೇಂದ್ರ ಪೆಟ್ರೋಲಿಯಂ ಪರಿಶೋಧನೆ ಮತ್ತು ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.