ನವದೆಹಲಿ: ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲಿರುವ ಚಿತ್ರಾತ್ಮಕ ಎಚ್ಚರಿಕೆಯ ಸಂದೇಶಗಳ ಗಾತ್ರವನ್ನು ಶೇ.65ರಷ್ಟು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.
ತಂಬಾಕಿನ ಬಗ್ಗೆ ಬಿಜೆಪಿ ಸಂಸದರು ದಿನಕ್ಕೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿರುವ ಬೆನ್ನಲ್ಲೇ ಮೋದಿಯ ಈ ಸೂಚನೆ ಹೊರಬಿದ್ದಿದೆ.
ಅಲಹಾಬಾದ್ನ ಬಿಜೆಪಿ ಸಂಸದ ಶ್ಯಾಮ್ ಚರಣ್ ಗುಪ್ತಾ ಅವರು ತಂಬಾಕಿನಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಯಾವುದೇ ಭಾರತೀಯ ಅಧ್ಯಯನ ದೃಢಪಡಿಸಿಲ್ಲ. ಭಾರತದ ಬೀಡಿ ಉದ್ಯಮವನ್ನು ನಾಶ ಮಾಡುವುದಕ್ಕೆ ಜಾಗತಿಕ ಮಟ್ಟದಲ್ಲಿ ಕುತಂತ್ರ ನಡೆಸಲಾಗುತ್ತಿದೆ ಎಂದು ಹೇಳಿ ವಿವಾದಕ್ಕೆ ನಾಂದಿ ಹಾಡಿದ್ದರು. ಆ ಬಳಿಕ ಮತ್ತೋರ್ವ ಬಿಜೆಪಿ ನಾಯಕ ಶುಗರ್ ಬರುತ್ತದೆ ಎಂದು ಸಕ್ಕರೆಯನ್ನು ಬ್ಯಾನ್ ಮಾಡುತ್ತೇವೆಯೇ? ಮತ್ತೇಕೆ ಕ್ಯಾನ್ಸರ್ ಬರುತ್ತದೆ ಎಂದು ತಂಬಾಕನ್ನು ನಿಷೇಧ ಮಾಡಬೇಕು ಎಂದಿದ್ದರು.
ಈ ಎಲ್ಲಾ ಹೇಳಿಕೆಗಳು ಬಿಜೆಪಿ ತಂಬಾಕು ಲಾಬಿಯ ಒತ್ತಡಕ್ಕೆ ಮಣಿದಿದೆಯೇ ಎಂಬ ಶಂಕೆ ಮೂಡುವಂತೆ ಮಾಡಿದ್ದವು. ಇದೀಗ ಸ್ವತಃ ಮೋದಿಯೇ ಎಚ್ಚರಿಕೆಯ ಸಂದೇಶವನ್ನು ಶೇ.60ಕ್ಕೆ ಏರಿಸುವಂತೆ ಸೂಚನೆ ನೀಡುವ ಮೂಲಕ ಸಂಸದರ ಹೇಳಿಕೆ ಸರ್ಕಾರ ನಿಲುವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.