ಲಕ್ನೋ: ಉತ್ತರ ಪ್ರದೇಶವನ್ನು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದಲ್ಲಿ 1,038 ಹೊಸ ಗಂಗಾ ಆರತಿ ತಾಣಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಹೊಸ ಗಂಗಾ ಆರತಿ ತಾಣಗಳು ಬಿಜ್ನೋರ್ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಇರಲಿವೆ. 5 ಕಿಲೋಮೀಟರ್ ತ್ರಿಜ್ಯದಲ್ಲಿ ಬರುವ ಗ್ರಾಮಗಳು ಈ ಆರತಿಗಳನ್ನು ನಿರ್ವಹಿಸಲಿವೆ. ಈ ಉಪಕ್ರಮವನ್ನು ಮುನ್ನಡೆಸುತ್ತಿರುವ ಪ್ರವಾಸೋದ್ಯಮ ಇಲಾಖೆಯು ಅದರ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಜನರನ್ನು ತೊಡಗಿಸಲಿವೆ.
“ಬಿಜ್ನೋರ್ನಿಂದ ಪ್ರಾರಂಭಿಸಿ, ಈ ಆರತಿ ಸರಣಿಯು ಯುಪಿ ಯ ಕೊನೆಯ ಹಳ್ಳಿಯವರೆಗೆ ಮುಂದುವರಿಯುತ್ತದೆ, ಕೊನೆಯ ಹಳ್ಳಿ ಬಲ್ಲಿಯಾದ ಗಂಗಾ ನದಿಯ ದಡದಲ್ಲಿದೆ” ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ಗಂಗಾ ಆರತಿಯ ಜೊತೆಗೆ, ಈ ಗ್ರಾಮಗಳಲ್ಲಿನ ಪ್ರಾಚೀನ ಮತ್ತು ಐತಿಹಾಸಿಕ ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳನ್ನು ಸಹ ಪ್ರವಾಸಿ ಆಕರ್ಷಣೆಗಳಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
ಗಂಗಾ ಆರತಿ ಪವಿತ್ರ ನಗರ ವಾರಣಾಸಿಯ ಅತ್ಯಂತ ವಿಶಿಷ್ಟ ಪದ್ಧತಿಗಳಲ್ಲಿ ಒಂದಾಗಿದೆ. ಗಂಗಾ ನದಿಯ ದಡದಲ್ಲಿ ನಡೆಯುವ ಪುಣ್ಯ ಸಮಾರಂಭದ ದರ್ಶನ ಪಡೆಯಲು ಪ್ರತಿವರ್ಷ ಲಕ್ಷಾಂತರ ಜನರು ಸೇರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.