ಬೆಳ್ತಂಗಡಿ : ಕಾಡು ಪ್ರಾಣಿ ಕಡವೆಯನ್ನು ಬೇಟೆಯಾಡಿದ ತಂಡದ ಓರ್ವ ಬೇಟೆಗಾರನನ್ನು ಸಿನೀಮಯ ರೀತಿಯಲ್ಲಿ ಸಾಹಸದಿಂದ ಬೆಳ್ತಗಂಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ತಂಡದ ಮೂವರು ಬೇಟೆಗಾರರು ಪರಾರಿಯಾಗಿದ್ದಾರೆ.
ಮಿತ್ತಬಾಗಿಲು ಗ್ರಾಮದ ಕೂಡಬೆಟ್ಟು ಎಂಬಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಪ್ರಾಣಿಯನ್ನು ಭೇಟೆಯಾಡಿದ ಪ್ರಕರಣ ನಡೆದಿದೆ. ಬಂಧಿತಆರೋಪಿ ನೆಲ್ಯಾಡಿಮಲೆಂಕಲ್ಲು ನಿವಾಸಿ ಬಿಜು ಯಾನೆ ಜಗದೀಶ್(42)ಎಂಬಾತನಾಗಿದ್ದಾನೆ. ಈತನೊಂದಿಗಿದ್ದ ಪುತ್ತೂರು ತಾಲೂಕು ಕೌಕ್ರಾಡಿ ನಿವಾಸಿ ಅಬ್ದುಲ್ ರಹಿಮಾನ್ (45), ನೆಲ್ಯಾಡಿ ಗ್ರಾಮದ ರಫೀಕ್ (40) ಹಾಗು ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಹೈದರಾಲಿ(38) ತಪ್ಪಿಸಿಕೊಂಡಿದ್ದಾರೆ. ಇವರು ಉಪಯೋಗಿಸಿದ್ದ ಬೊಲೇರೋ ವಾಹನವನ್ನು, ಭೇಟೆಗೆ ಉಪಯೋಗಿಸಿದ ಕೋವಿ ಹಾಗು ಮದ್ದು ಗುಂಡುಗಳನ್ನು, ಭೇಟೆಯಾಡಿದ್ದ ಗಂಡು ಕಡವೆಯ ಶವವನ್ನು ವಶಪಡಿಸಿಕೊಳ್ಳಲಾಗಿದೆ.
ಅರಣ್ಯದಲ್ಲಿ ಗುಂಡಿನ ಶಬ್ದ ಕೇಳಿ ಜಗೃತರಾದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶ್ರೀನಾಧ್ ಎಂ ಕಡೋಲ್ಕರ್ ನೇತೃತ್ವದ ತಂಡ ಬೇಟೆಗಾರರಿಗಾಗಿ ಕಾದು ಕುಳಿತಿದ್ದರು. ಬೇಟೆಗಾರರು ಬೊಲೆರೋ ವಾಹನದಲ್ಲಿ ಕಡವೆಯನ್ನು ಹಾಕಿಕೊಂಡು ಬರುತ್ತಿದ್ದರು. ವಾಹನ ತಡೆಯಲು ರಸ್ತೆಗೆ ಅಡ್ಡಲಾಗಿ ಕಲ್ಲನ್ನು ಹಾಕಿದ್ದರು. ಆದರೆ ವೇಗವಾಗಿ ತಮ್ಮ ವಾಹನವನ್ನು ಕಲ್ಲುಗಳ ಮೇಲೆ ರಭಸವಾಗಿ ಹತ್ತಿಸಿಕೊಂಡು ಮುಂದಕ್ಕೆ ಕೊಂಡು ಹೋಗಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಬೈಕ್ಗಳಲ್ಲಿ ಬೊಲೇರೋವನ್ನು ಬೆನ್ನುಹಿಡಿದ ತಂಡ ಮತ್ತೆ ಬೈಕ್ ಅನ್ನು ಅಡ್ಡ ಇಟ್ಟಿದ್ದಾರೆ. ಆದರೆ ನಿಲ್ಲಿಸಿದ್ದ ಬೈಕ್ನ ಮೇಲೂ ಗಾಡಿಯನ್ನು ಹತ್ತಿಸಿದ್ದಾರೆ.
ಇಲಾಖೆಯವರು ಹಾರಿ ತಪ್ಪಿಸಿಕೊಂಡಿದ್ದಾರೆ. ಆದರೆ ಚಕ್ರದಡಿಗೆ ಬೈಕ್ ಸಿಲುಕಿ ಬೊಲೇರೋ ನಿಂತಿದೆ. ಅದರಲ್ಲಿದ್ದಇತರ ಮೂವರು ವಾಹನದಿಂದ ಹಾರಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜು ಮಾತ್ರ ಅರಣ್ಯ ಇಲಾಖೆಯವರ ಕೈಗೆ ಸಿಲುಕಿದ್ದಾರೆ. ಘಟನಾ ಸ್ಥಳಕ್ಕೆ ಡಿಎಫ್ಒ ಪ್ರಕಾಶ್ ನಟೇಕರ್, ಎಸಿಎಪ್ ಭಾಸ್ಕರ್,ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಅರಣ್ಯಿ ಇಲಾಖೆಯವರು ಪ್ರಕರಣವನ್ನು ದಾಕಲಿಸಿಕೊಂಡಿದ್ದಾರೆ. ಬಂದಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.